ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಬಯಸುವ ಗ್ರಾಹಕರಿಗೆ ಇಂದು ಶುಭ ಸುದ್ದಿ ಸಿಕ್ಕಿದೆ. ಕೊಂಚ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಗುರುವಾರದಿಂದ ಇಳಿಕೆಯಾಗಿದ್ದು, ಶುಕ್ರವಾರ ಬೆಳಿಗ್ಗೆ ಈ ಕುಸಿತ ಮತ್ತಷ್ಟು ಸ್ಪಷ್ಟವಾಗಿ ಕಂಡು ಬಂದಿದೆ.
ಸಂಕ್ರಾಂತಿ ಹಬ್ಬ ಹಾಗೂ ಮದುವೆ, ವೈವಾಹಿಕ ಸಮಾರಂಭಗಳ ಸಮಯದಲ್ಲಿ ಚಿನ್ನದ ಬೆಲೆ ಹೆಚ್ಚು ಚರ್ಚೆಯ ವಿಷಯವಾಗುತ್ತಾ ಇರುತ್ತದೆ. ಜನವರಿ ಕೊನೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿತ್ತು. ಆದರೆ ಕಳೆದ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣಿಸಿಕೊಂಡಿತ್ತು. ಇದು ಗ್ರಾಹಕರಿಗೆ ತೀವ್ರವಾಗಿದ್ದ ನಿರಾಶೆಯನ್ನುಂಟುಮಾಡಿತ್ತು.
ಆದರೆ ಗುರುವಾರದಿಂದ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡು, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ ₹502 ಕಡಿಮೆಯಾಗಿದೆ. ಗುರುವಾರ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂ ₹15,442 ಆಗಿತ್ತು. 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂ ₹460 ಇಳಿಕೆ ಹೊಂದಿದ್ದು, ಜನರನ್ನು ಸಂತೋಷಪಡಿಸಿದೆ.
ಶುಕ್ರವಾರ ಬೆಳ್ಳಂಬೆಳಗ್ಗೆ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಹತ್ತು ಗ್ರಾಂ ಗೆ ಬರೋಬ್ಬರಿ 2070 ರೂಪಾಯಿ ಕುಸಿತ ಕಂಡಿದೆ. ಗುರುವಾರ 24 ಕ್ಯಾರಟ್ ಪ್ರತಿ ಗ್ರಾಂ ಚಿನ್ನದ ಬೆಲೆ 442 ರೂಪಾಯಿಗಳಾಗಿದ್ದವು. ಆದರೆ ಇಂದು ಒಂದು ಗ್ರಾಂ ಗೆ 207 ರೂಪಾಯಿ, ಹಾಗೆಯೇ 10 ಗ್ರಾಂಗೆ 2070 ರುಪಾಯಿ ಕುಸಿತ ಕಂಡಿದೆ.
ಹಬ್ಬ ಹಾಗೂ ಶುಭ ಸಮಾರಂಭಗಳ ಸಂದರ್ಭದಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದು ಗ್ರಾಹಕರಿಗೆ ಕೆಲವು ನೆಮ್ಮದಿ ನೀಡುತ್ತಿದೆ. ಈ ಕುಸಿತ ಮುಂದುವರೆಯುತ್ತಾ ಅಥವಾ ಮತ್ತೆ ಹೆಚ್ಚುತ್ತಾ ಎನ್ನುವುದನ್ನು ಕಾದುನೋಡಬೇಕಾಗಿದೆ.
ವರದಿ : ಲಾವಣ್ಯ ಅನಿಗೋಳ




