Recipe: ಮಕ್ಕಳ ಟಿಫಿನ್‌ ಬಾಕ್ಸ್‌ಗೆ ಈ ಆರೋಗ್ಯಕರ ಸ್ನ್ಯಾಕ್ಸ್ ರೆಡಿ ಮಾಡಬಹುದು ನೋಡಿ..

Recipe: 1 ಕಪ್ ಗೋದಿ ಹುಡಿ, ಉಪ್ಪು, 4 ಸ್ಪೂನ್ ಎಣ್ಣೆ, ನೀರು, ಪಾಲಕ್ ಪೇಸ್ಟ್, ಚಿಕ್ಕ ತುಂಡು ಬೇಯಿಸಿದ ಆಲೂ ಅಥವಾ ಸಿಹಿ ಗೆಣಸು, ಇದು ಚಪಾತಿಗೆ ಹಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿ.

ಈಗ 1 ಕಪ್ ಹುರುಳಿ ಅಥವಾ ನಿಮಗೆ ಯಾವುದು ಕಾಳು ಬೇಕೋ ಅದನ್ನು ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ ಲೈಟ್ ಆಗಿ ಬೇಯಿಸಿ. ಇದರಲ್ಲಿ ಅರ್ಧ ಹಾಗೇ ಇರಿಸಿ, ಇನ್ನರ್ಧ ಮ್ಯಾಶ್ ಮಾಡಿ.

ಈಗ ಈ ಎರಡನ್ನೂ ಮಿಕ್ಸ್ ಮಾಡಿ, ಇದಕ್ಕೆ ಪನೀರ್ ತುರಿ, ಕ್ಯಾರೇಟ್ ತುರಿ, ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಶುಂಠಿ, ಎಳ್ಳು ಮತ್ತು ಚಿಲ್ಲಿ ಫ್ಲೇಕ್ಸ್, ಸ್ವಲ್ಪ ಚಾಟ್ ಮಸಾಲಾ, ಸ್ವಲ್ಪ ನಿಂಬೆರಸ, ಇವೆಲ್ಲವನ್ನೂ ಹಾಕಿ ಮಿಕ್ಸ್ ಮಾಡಿದ್ರೆ ಫಿಲ್ಲಿಂಗ್ ರೆಡಿ.

ಈಗ ಚಿಕ್ಕ ಚಿಕ್ಕ ಚಪಾತಿ ತಯಾರಿಸಿ, ಬೇಯಿಸಿ. ನಂತರ ಅದರಲ್ಲಿ ಸ್ವಲ್ಪ ಹಂಗ್ ಕರ್ಡ್ ಹಾಕಿ ಸ್ಪ್ರೆಡ್ ಮಾಡಿ. ತಯಾರಿಸಿದ ಹೂರಣ ಹಾಕಿ ಟಾಕೋಸ್ ರೀತಿ ರೆಡಿ ಮಾಡಿ. ಅವಶ್ಯಕತೆ ಇದ್ದಲ್ಲಿ ಸೇವ್ ಸೇರಿಸಿ, ಮಕ್ಕಳಿಗೆ ಸವಿಯಲು ನೀಡಿ. ಇದು ಆರೋಗ್ಯಕರವೂ ಆಗಿದ್ದು, ರುಚಿಕರವೂ ಆಗಿದೆ.

 

About The Author