ಬದುಕಿದ ಅಪ್ಪನಿಗೆ ಶ್ರಾದ್ಧ ಮಾಡಲು ಮುಂದಾಗಿದ್ದ ಮಗನ ಕಥೆ: ಮಕ್ಕಳಿಗೆ ಸಂಸ್ಕಾರ ಏಕೆ ಮುಖ್ಯ..?

Spiritual: ಪರ್ತಗಾಳಿಮಠದ ಶ್ರೀಗಳಾದ ವಿದ್ಯಾಧೀಶತೀರ್ಥರು ವಚನಾಮೃತ ಕಾರ್ಯಕ್ರಮದಲ್ಲಿ ಹಲವು ಹಿತ ವಚನಗಳನ್ನು ಹೇಳುತ್ತಾರೆ. ಅದೇ ರೀತಿ 1 ಕಥೆಯನ್ನು ಹೇಳುವ ಮೂಲಕ, ನಮ್ಮ ಮಕ್ಕಳಿಗೆ ನಾವು ಯಾವ ರೀತಿಯಾಗಿ ಸಂಸ್ಕಾರ ಹೇಳಿಕ`ಡಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ.

ಓರ್ವ ಹಿಂದೂ ಯುವ ವಿದ್ಯಾಭ್ಯಾಸ ಮುಗಿಸಿ, ಅಮೆರಿಕಕ್ಕೆ ಹೋಗುತ್ತಾನೆ. ಅಲ್ಲಿ ಉತ್ತಮ ಸಂಬಳವಿರುವ ಕೆಲಸ ಸಿಗುತ್ತದೆ. ಆತ ಚೆನ್ನಾಗಿ ದುಡಿಯುತ್ತಾನೆ. ದುಡ್ಡು ಮಾಡುತ್ತಾನೆ. ಆದರೆ ಅವನಿಗೆ ನೆಮ್ಮದಿ ಇರುವುದಿಲ್ಲ.

1 ಬಾರಿ ಆತ ಭಾರತಕ್ಕೆ ಬರುತ್ತಾನೆ. ಆಗ 1 ದೇವಸ್ಥಾನಕ್ಕೆ ಹೋಗುತ್ತಾನೆ. ಆ ದೇವಸ್ಥಾನದಲ್ಲಿ ನಾವು ಯಾವ ಸೇವೆ ಮಾಡಿಸುತ್ತೇವೋ, ಅದೇ ರೀತಿ ನಮ್ಮ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದು ಜನ ಮಾತನಾಡಿರುತ್ತಾರೆ. ಇದನ್ನು ಕೇಳಿದ ಆ ಯುವಕ, ಸೇವೆಯ ಲೀಸ್ಟ್ ನೋಡುತ್ತಾನೆ.

ಹೇಳಿಕೇಳಿ ಈತ ಶ್ರೀಮಂತ. ಹೆಚ್ಚು ದುಡ್ಡು ಸಂಪಾದನೆ ಮಾಡಿದ್ದಾನೆ. ಹಾಗಾಗಿ ಈತನ ಮನಸ್ಸಿನಲ್ಲಿ 1 ಯೋಚನೆ ಬರುತ್ತದೆ. ಸೇವೆ ಮಾಡಿಸಿದ್ದಲ್ಲಿ ನೆಮ್ಮದಿ ಸಿಗುವುದೇ ಆಗಿದ್ದಲ್ಲಿ, ಹೆಚ್ಚು ಹಣಇರುವ ಸೇವೆಯನ್ನೇ ಮಾಡಿಸುತ್ತೇನೆ ಎಂದು ಲೀಸ್ಟ್ ಚೆಕ್ ಮಾಡುತ್ತಾನೆ.

ಆ ಲೀಸ್ಟ್‌ನಲ್ಲಿ ಶ್ರಾದ್ಧ ಸೇವೆಗೆ ಹೆಚ್ಚು ಹಣವಿರುತ್ತದೆ. ಹಾಗಾಗಿ ಆತ ಶ್ರಾದ್ಧ ಸೇವೆಯನ್ನೇ ಬುಕ್ ಮಾಡುತ್ತಾನೆ. ಹಣ ನೀಡುತ್ತಾನೆ. ಹಣ ಪಡೆದ ಅರ್ಚಕರು ಅನ್ನ ಮಾಡಿ, ಪಿಂಡ ರೆಡಿ ಮಾಡಿ, ಶ್ರಾದ್ಧಕ್ಕೆಲ್ಲ ತಯಾರಿ ಮಾಡುತ್ತಾರೆ.

3 ಪಿಂಡ ರೆಡಿ ಮಾಡಿದ್ದು, 1 ತಂದೆಗೆ, 2ನೇಯದ್ದು ಅಜ್ಜನಿಗೆ, 3ನೇಯದ್ದು ಪಿಜ್ಜ ಅಂದ್ರೆ ಮುತ್ತಜ್ಜನಿಗೆ ರೆಡಿ ಮಾಡಿರುತ್ತಾರೆ. ಆ ವ್ಯಕ್ತಿಯನ್ನು ಕರೆತಂದು ಕೂರಿಸಿ, ತಂದೆಯ ಹೆಸರು ಕೇಳುತ್ತಾರೆ. ಆತ ತಂದೆಯ ಹೆಸರು ಹೇಳುತ್ತಾನೆ. ಅರ್ಚಕರು ಅಪ್ಪನ ಹೆಸರು ಹೇಳಿ, ಪಿಂಡ ಪ್ರಧಾನ ಮಾಡುತ್ತಾರೆ.

ಅಜ್ಜನ ಹೆಸರೇನು ಕೇಳುತ್ತಾರೆ. ಆಗ ಆ ವ್ಯಕ್ತಿ ನನಗೆ ನನ್ನ ಅಜ್ಜನ ಹೆಸರೇನು ತಿಳಿದಿಲ್ಲ. ಆದರೆ ಅಪ್ಪನಿಗೆ ತಿಳಿದಿರಬಹುದು. ನಾನು ಕಾಲ್ ಮಾಡಿ ಕೇಳಿ ಹೇಳುತ್ತೇನೆ ಎನ್ನುತ್ತಾನೆ. ಇಲ್ಲಿಗೆ ಅಪ್ಪ ಇನ್ನೂ ತೀರಿ ಹೋಗಿಲ್ಲ ಎಂದರ್ಥ.

ಅಂದ್ರೆ ಈ ವ್ಯಕ್ತಿಗೆ ಪಿಂಡ ಇಡುವುದು, ಶ್ರಾದ್ಧ ಮಾಡುವುದೆಲ್ಲ ಸತ್ತ ನಂತರ ಅನ್ನುವ ವಿಷಯವೇ ತಿಳಿದಿರಲಿಲ್ಲ. ಅಂದ್ರೆ ಆತನ ಮನೆಯಲ್ಲಿ ಆತನಿಗೆ ಸಂಸ್ಕಾರದ  ಕೊರತೆ ಇತ್ತು ಎಂದರ್ಥ. ಹಾಗಾಗಿ ಮಕ್ಕಳಿಗೆ ಜವಾಬ್ದಾರಿ, ಸಂಸ್ಕಾರ ಎರಡನ್ನೂ ಸರಿಯಾದ ಸಮಯಕ್ಕೆ ಪೋಷಕರು ನೀಡಬೇಕು ಎಂದು ಶ್ರೀಗಳು ಈ ಕಥೆಯ ಮೂಲಕ ತಿಳಿ ಹೇಳಿದ್ದಾರೆ.

About The Author