ಪತ್ನಿ ಪತಿಯ ದಾಸಿ, ಮೂಳೆ ಮುರಿಯುವತನಕ ಆಕೆಗೆ ಹೊಡೆಯಬಹುದು: ಜಾರಿಯಾಯ್ತು ಹೊಸ ತಾಲೀಬಾನ್ ಕಾನೂನು

Taliban: ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಹೆಣ್ಣಿಗೆ ಉನ್ನತ ಸ್ಥಾನವಿದೆ. ಆಕೆಯನ್ನು ದೇವಿಯ ರೂಪದಲ್ಲಿ ಕಾಣಲಾಗುತ್ತದೆ. ಕೆಲವು ಪುರುಷರಂತೂ ಪತ್ನಿ, ತಾಯಿ, ಮಗಳು, ಸಹೋದರಿಯನ್ನು ಅದೆಷ್ಟು ಪ್ರೀತಿಸುತ್ತಾರೆಂದರೆ, ಅವರಿಗಾಗಿ ಪ್ರಾಣ ನೀಡಲು ಸಿದ್ಧರಿರುತ್ತಾರೆ.

ಆದರೆ ಅದೇ ಸ್ತ್ರೀಗೆ ಕೆಲವು ಕಡೆ ಪುರುಷರು ನರಕವನ್ನೇ ತೋರಿಸುತ್ತಾರೆ. ಅಂಥ ಕಾನೂನನ್ನು ಇದೀಗ ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಅಫ್ಘಾನಿಸ್ತಾನದಲ್ಲಿ ನೂತನ ಕಾನೂನು ಜಾರಿಗೆ ತರಲಾಗಿದ್ದು, ಈ ಕಾನೂನಿನಲ್ಲಿ ಪತ್ನಿ ಪತಿಯ ದಾಸಿಯಾಗಿದ್ದು, ಪತಿ ಆಕೆಗೆ ಹೇಗೆ ಬೇಕಾದ್ರೂ ಹಿಂಸೆ ನೀಡಬಹುದು. ಬಡಿಯಬಹುದು ಅಂತಾ ಹೇಳಲಾಗಿದೆ.

ಅಲ್ಲದೇ, ಎಲ್ಲಿಯವರೆಗೆ ಆಕೆಯ ಮೂಳೆ ಮುರಿಯುವುದಿಲ್ಲವೋ, ರಕ್ತ ಚಿಮ್ಮುವುದಿಲ್ಲವೋ, ಅಲ್ಲಿಯವರೆಗೆ ಆಕೆಯ ಮೇಲೆ ಹಲ್ಲೆ ಮಾಡಿದರೆ, ಅದು ಕ್ರೈಂ ಅಲ್ಲ ಅಂತಾ ಕಾನೂನನ್ನು ಜಾರಿಗೆ ತರಲಾಗಿದೆ. ಇನ್ನು ತಾಲಿಬಾನ್‌ನ ಈ ಕಾನೂನಿಗೆ ಎಲ್ಲೆಡೆ ಭಾರೀ ಅಕ್ರೋಶ ವ್ಯಕ್ತವಾಗಿದೆ.

About The Author