Health Tips: ವೈದ್ಯರಿಗೆ 7 ತರಹದ ಶಾಪ? ಅಲೋಪತಿ ಅಂಥ ಯಾಕ್ ಹೇಳ್ತಾರೆ.?

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ವೈದ್ಯರಿಗಿರುವ 7 ತರಹದ ಶಾಪಗಳ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.

ಜನರಿಗೆ ಯಾವ ಆಸ್ಪತ್ರೆಗೆ ಹೋಗಬೇಕು ಅನ್ನೋ ಕಳವಳ ಇರುತ್ತದೆ. ಆಲೋಪತಿಕ್, ಹೋಮಿಯೋಪತಿಕ್, ಆಯುರ್ವೇದಿಕ್, ನಾಟಿ ಮದ್ದು ಹೀಗೆ ಬೇರೆ ಬೇರೆ ರೀತಿಯ ಔಷಧಿಗಳು ಸಿಗುತ್ತದೆ. ಜನರಿಗೆ ಇವುಗಳಲ್ಲಿ ಎಲ್ಲಿ ಹೋಗಬೇಕು ಅಂತಾ ಕನ್‌ಫ್ಯೂಶನ್ ಇರುತ್ತದೆ. ಎಲ್ಲರಿಗೂ ಹೆಚ್ಚು ಹಣ ನೀಡಿ, ಚಿಕಿತ್ಸೆ ಪಡೆಯುವ ಯೋಗ್ಯತೆ ಇರುವುದಿಲ್ಲ. ಅಂಥವರು ಸಣ್ಣ ಸಣ್ಣ ಮದ್ದು ಮಾಡುತ್ತಾರೆ. ಕೆಲವು ಬಾರಿ ಮನೆಮದ್ದು ಮಾಡಿ ಸುಮ್ಮನಾಗುತ್ತಾರೆ.

ಇನ್ನು ಕೆಲವು ವೈದ್ಯರು ಅನ್ನೆಸಸರಿ ಚಿಕಿತ್ಸೆ ನೀಡುತ್ತಾರೆ. ಅವಶ್ಯಕತೆಯೇ ಇಲ್ಲದ ಚಿಕಿತ್ಸೆ, ಆಹಾರ ಎಲ್ಲವೂ ನೀಡುತ್ತಾರೆ. ಹಣ ಖರ್ಚು ಮಾಡಿಸುತ್ತಾರೆ. ಅವೈಜ್ಞಾನಿಕ ಚಿಕಿತ್ಸೆ ನೀಡುತ್ತಾರೆ. ಇದರಿಂದಲೇ ಜನ ವೈದ್ಯರಿಗೆ ಶಾಪ ಹಾಕುತ್ತಾರೆ.

ಹಲವು ವೈದ್ಯರು ಗಲ್ಲಿ ಗಲ್ಲಿಗಳಲ್ಲಿ ಲ್ಯಾಬ್ ಓಪನ್ ಮಾಡಿ, ಬೇಡದೇ ಇರೋ ಟೆಸ್ಟ್ ಮಾಡಲು ಹೇಳುತ್ತಾರೆ. ಅನಗತ್ಯ ಪರೀಕ್ಷೆಗಳ ಪ್ರಯೋಗ ಮಾಡಿ, ಉತ್ತಮ ವೈದ್ಯರ ಹೆಸರು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಜನ ಎಲ್ಲ ವೈದ್ಯರಿಗೂ ಶಾಪ ಹಾಕುತ್ತಿದ್ದಾರೆಂದು ಡಾ. ಪ್ರಕಾಶ್ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author