ರಶ್ಮಿಕಾ-ವಿಜಯ್ ಮದುವೆ ವಿಶೇಷ: ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ತಾರಾ ಜೋಡಿ

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೋಂಡ 7 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು. ಫೆಬ್ರವರಿ 26ಕ್ಕೆ ಹಸೆಮಣೆ ಏರಿದ್ದಾರೆ.

ರಾಜಸ್ಥಾನದಲ್ಲಿ ಈ ಜೋಡಿ ವಿವಾಹವಾಗಿದ್ದು, ಇವರ ಮದುವೆ ಈಗ ಮನೆ ಮಾತಾಗಿದೆ. ಇವರು ಧರಿಸಿದ ಉಡುಪು, ಇವರಿಬ್ಬರ ಆಭರಣಗಳನ್ನಂತೂ ಜನ ಹೆಚ್ಚು ಮೆಚ್ಚಿದ್ದಾರೆ. ಇಷ್ಟು ದಿನ ಹೆಣ್ಣು ಮಕ್ಕಳಿಗಾಗಿ ಆಭರಣ ಮಾಡಿಸುತ್ತಿದ್ದೆವು, ಈಗ ಹುಡುಗರ ಅಮ್ಮಂದಿರು ಕೂಡ ಚಿನ್ನ ಹೂಡಿಕೆಗೆ ಮುಂದಾಗಬೇಕು ಅನ್ನೋ ರೀತಿ ಹೆಲ್ದಿ ಟ್ರೋಲ್ ಆಗುತ್ತಿದೆ.

ವಿಜಯ್ ಧರಿಸಿದ ಉಡುಪು, ಆಭರಣಗಳಂತೂ ರಾಜರ ಉಡುಗೆಯಂತಿತ್ತು. ಹಾಗಾಗಿ ವಿಜಯ್ ಮತ್ತು ರಶ್ಮಿಕಾ ಮದುವೆಯನ್ನು ಹಲವರು ಸ್ವರ್ಗಲೋಕದ ಮದುವೆ ಅಂತಲೇ ಸಂಬೋಧಿಸಿದ್ದಾರೆ. ರಾಜಸ್ತಾನದ ಯಾವುದೋ ಪ್ಯಾಲೇಸ್‌ನಲ್ಲಿ ಮದುವೆ ಅಂದಾಕ್ಷಣ ನಾವೆಲ್ಲ ಬೇರೆ ಸೆಲೆಬ್ರಿಟಿಗಳ ರೀತಿ, ಇವರು ಕೂಡ ಪಿಂಟ್ರೆಸ್ಟ್ ದಿರಿಸು ಧರಿಸುತ್ತಾರೆ ಅಂತಾ ತಿಳಿದಿದ್ವಿ. ಆದರೆ ಇದು ದಕ್ಷಿಣ ಭಾರತೀಯರ ರೀತಿಯಲ್ಲೇ ವಿವಾಹವಾಗಿದ್ದು, ಸ್ವರ್ಗವನ್ನೇ ಧರೆಗಿಳಿಸಿದಂತಿತ್ತು ಅಂತಾ ಹೇಳಿದ್ದಾರೆ ನೆಟ್ಟಿಗರು.

ಇದೀಗ ತಮ್ಮ ಮದುವೆ ವಿಶೇಷವಾಗಿ ರಶ್ಮಿಕಾ ಮತ್ತು ವಿಜಯ್ ದೇಶಾದ್ಯಂತ ಅನ್ನದಾಸೋಹಕ್ಕೆ ಮುಂದಾಗಿದೆ. ದೇಶದ ಎಲ್ಲಾ ರಾಜ್ಯಗಳ ಪ್ರಸಿದ್ಧ ದೇವಸ್ಥಾನಗಳಲ್ಲಿ ಅನ್ನದಾನ ಮಾಡಲು ಮುಂದಾಗಿದ್ದಾರೆ ವಿರೋಶ್. ಮಾರ್ಚ್ 1ರಿಂದಲೇ ಅವರು ಸೂಚಿಸಿರುವ ದೇವಸ್ಥಾನಗಳಲ್ಲಿ ವಿಶೇಷ ಅನ್ನ ಸಂತರ್ಪಣೆ ನಡೆಯಲಿದೆ. ಮತ್ತು ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಲವು ಸೆಲೆಬ್ರಿಟಿಸ್ ಬರುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ, ಕೂರ್ಗ್‌ನ ದೇವಸ್ಥಾನದಲ್ಲಿ ಮತ್ತು ಬೆಂಗಳೂರಿನ 2 ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ನಡೆಯಲಿದೆ.

About The Author