Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕ“ಂಡಾ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಿದ್ದರು.
ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ, ತಮ್ಮ ಹುಟ್ಟೂರಿಗೂ ಹೋಗಿ ಬಂದರು. ಹುಟ್ಟೂರಿನಲ್ಲಿರುವ ಫಾರ್ಮ್ ಹೌಸ್ನಲ್ಲಿ ಸತ್ಯನಾರಾಯಣ ಪೂಜೆ ಮಾಡಿ, ಅಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ಅನ್ನ ಸಂತರ್ಪಣೆ ನೆರವೇರಿಸಲಾಗಿದೆ.
ಇದೀಗ ರಶ್ಮಿಕಾ ಮತ್ತು ವಿಜಯ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಸಂಗೀತ್ ಕಾರ್ಯಕ್ರಮದ ಕಲರ್ಫುಲ್ ಫೋಟೋ ಶೇರ್ ಮಾಡಿದ್ದಾರೆ.
7 ವರ್ಷದಿಂದ ಪರಸ್ಪರ ಪ್ರೀತಿಸಿದ್ದ ವಿಜಯ್-ರಶ್ಮಿಕಾ ಎಲ್ಲಿಯೂ ತಾವು ಪ್ರೀತಿಸುತ್ತಿದ್ದ ವಿಷಯ ಹೇಳಿರಲಿಲ್ಲ. ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗ, ಹಾರಿಕೆಯ ಉತ್ತರ ನೀಡುತ್ತಿದ್ದರು. ಅಲ್ಲದೇ, ವಿಜಯ್ ಮತ್ತು ರಶ್ಮಿಕಾ ಬರ್ತ್ಡೇ ದಿನ ಅಥವಾ ಯಾವುದೇ ವಿಶೇಷ ದಿನಗಳಲ್ಲಿ ಇಬ್ಬರೂ ಸೇರಿ ವಿದೇಶ ಪ್ರವಾಸಕ್ಕೆ ಕೂಡ ಹೋಗುತ್ತಿದ್ದರು.
ಮರುದಿನ ಇನ್ಸ್ಟಾದಲ್ಲಿ ಬರುವ ಅವರ ಫೋಟೋಸ್ ನೋಡಿಯೇ ಅಭಿಮಾನಿಗಳು, ಇವರಿಬ್ಬರೂ ಪಕ್ಕಾ ಲವ್ ಮಾಡ್ತಿದ್ದಾರೆ ಅಂತಾ ಗೆಸ್ ಮಾಡ್ತಿದ್ರು. ಮತ್ತು ಹೆಲ್ದಿ ಟ್ರೋಲ್ ಕೂಡ ಮಾಡ್ತಿದ್ರು. ಇದೀಗ ರಶ್ಮಿಕಾ-ವಿಜಯ್ ವಿವಾಹವಾಗಿದ್ದು, ಅವರ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಅಲ್ಲದೇ, ಭಾರತದ ಎಲ್ಲ ರಾಜ್ಯಗಳ ಕೆಲವು ದೇವಸ್ಥಾನಗಳಲ್ಲಿ ಈಗಾಗಲೇ ಮದುವೆ ವಿಶೇಷವಾಗಿ ಅನ್ನ ಸಂತರ್ಪಣೆ ನಡೆಯುತ್ತಿದ್ದು, ಕೆಲವು ವಿಶೇಷ ಸ್ಥಳಗಳಲ್ಲಿ ಜನರಿಗೆ ಸಿಹಿ ಇರುವ ಬಾಕ್ಸ್ ವಿತರಿಸಲಾಗುತ್ತಿದೆ.
ಇನ್ನು ರಶ್ಮಿಕಾ ಮತ್ತು ವಿಜಯ್ ತಮ್ಮ ಮದುವೆಯಲ್ಲಿ ಯಾವ ರೀತಿ ಟ್ರೆಡಿಷನಲ್ ಆಗಿ ರೆಡಿಯಾಗಿದ್ದರು ಅಂತಾ ಎಲ್ಲರಿಗೂ ತಿಳಿದೇ ಇದೆ. ರಶ್ಮಿಕಾ ಚಿನ್ನದ ಆಭರಣ ಧರಿಸಿದ್ದಕ್ಕಿಂತ, ವಿಜಯ್ ಧರಿಸಿದ ಆಭರಣವನ್ನು ಹಲವರು ಮೆಚ್ಚಿದ್ದಾರೆ. ಇಬ್ಬರೂ ನೂರ್ಕಾಲ ಸುಖವಾಗಿರಲಿ ಎಂದು ಅವರ ಅಭಿಮಾನಿಗಳು, ಹರಸಿ ಹಾರೈಸಿದ್ದಾರೆ.
ರಶ್ಮಿಕಾ ಮಂದಣ್ಣ- ವಿಜಯ್ ಸಂಗೀತ್ ಕಾರ್ಯಕ್ರಮದ ಫೋಟೋಸ್ಗಾಗಿ ಇಲ್ಲಿ ಕ್ಲಿಕ್ ಮಾಡಿ..




