Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ.
27 ವರ್ಷದ ಕಾವ್ಯಾ ಎಂಬಾಕೆ ರಂಗಸ್ವಾಮಿ ಎಂಬುವವನನ್ನು 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಕಾವ್ಯಾ ಮೂರು ದಿನದಿಂದ ಸೇಮ್ ಸಾಂಬಾರನ್ನು ಫ್ರಿಜ್‌ನಲ್ಲಿರಿಸಿ, ಬಿಸಿ ಮಾಡಿ ಮಾಡಿ ಬಡಿಸಿದ್ದು, ಇದರಿಂದ ಕೋಪಗ“ಂಡ ಪತಿ ರಂಗಸ್ವಾಮಿ, ಇದು ಮೂರು ದಿನದ ಹಿಂದಿ ಸಾಂಬಾರ್ ಅಲ್ಲವಾ ಅಂತಾ ಜಗಳ ಮಾಡಿದ್ದಾನೆ.
ಗಂಡನ ಮಾತಿಗೆ, ಬೈಗುಳಕ್ಕೆ ಬೇಸರಗ“ಂಡ ಪತ್ನಿ ಕಾವ್ಯಾ ವಿಷ ಸೇವಿಸಿ, ಸಾವಿಗೀಡಾಗಿದ್ದಾಳೆ. ವಿಷ ಸೇವಿಸಿದ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯ್ತು. ಆದರೆ ಅದಾಗಲೇ ಆಕೆ ಸಾವನ್ನಪ್ಪಿದ್ದಳು. ಇದೀಗ ಇಬ್ಬರ ಜಗಳದಲ್ಲಿ, ತಾಯಿ ಕಳೆದುಕ“ಂಡ ಮಗು ಅನಾಥವಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳೀಯ ಪೋಲೀಸ್ ಠಾಣೆಯಲ್ಲಿ ರಂಗಸ್ವಾಮಿ ವಿರುದ್ಧ ದೂರು ನೀಡಲಾಗಿದೆ. ಪೋಲೀಸರು ತನಿಖೆ ಮುಂದುವರಿಸಿದ್ದಾರೆ.




