Belagavi News: ಆಸ್ತಿಗಾಗಿ ಪ್ರೀತಿಸುತ್ತಿದ್ದವಳನ್ನೇ ಹ*ತ್ಯೆ ಗೈದ ದುರುಳ

Belagavi News: ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಆಸ್ತಿ ಆಸೆಗಾಗಿ ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿದ್ದ ಮಹಿಳೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೌದು, ಅಥಣಿ ಪಟ್ಟಣದ ಸಮೀಪವಿರುವ ಕಬ್ಬಿನ ತೋಟವೊಂದು ಈಗ ರಕ್ತಸಿಕ್ತವಾಗಿದ್ದು, ಸುಜಾತಾ ಪವಾರ್ ಎಂಬ 34 ವರ್ಷದ ಮಹಿಳೆ ಈ ಕೃತ್ಯಕ್ಕೆ ಬಲಿಯಾಗಿದ್ದಾರೆ.

ಮೃತ ಸುಜಾತಾ ಹಾರೂಗೇರಿಯಲ್ಲಿದ್ದ ತನ್ನ ಗಂಡನ ಜೊತೆ ಮುನಿಸಿಕೊಂಡು ತವರುಮನೆಯಾದ ಅಥಣಿಯಲ್ಲಿ ವಾಸವಿದ್ದಳು. ಈ ವೇಳೆ ಈಕೆಗೆ ಕುಮಾರ್ ಹವಾಲ್ದಾರ್ ಎಂಬಾತನ ಪರಿಚಯವಾಗಿತ್ತು. ಆದರೆ ಸುಜಾತಾ ಹೆಸರಿನಲ್ಲಿದ್ದ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಈ ಕಿರಾತಕ ಕುಮಾರ್, ಅದನ್ನು ಹೊಡೆಯಲು ಭೀಕರ ಸ್ಕೆಚ್ ಹಾಕಿದ್ದ.

ಕಳೆದ ಮಾರ್ಚ್ 5 ರಂದು ಮಧ್ಯಾಹ್ನ ಸುಜಾತಾಳನ್ನು ಬೈಕ್ ಮೇಲೆ ಕರೆದೊಯ್ದ ಕುಮಾರ್, ಅಥಣಿ ಸಮೀಪದ ಪ್ರದೀಪ್ ಗುಂಡಾ ಎಂಬುವವರಿಗೆ ಸೇರಿದ ಕಬ್ಬಿನ ತೋಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಯಾರು ಇಲ್ಲದ ಸಮಯ ನೋಡಿ ಆಕೆಯ ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರು ಗಟ್ಟಿಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ.

ಈಗ ಈ ಪ್ರಕರಣದ ಬೆನ್ನತ್ತಿದ ಅಥಣಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಪ್ರೀತಿ-ವಿಶ್ವಾಸದ ಹೆಸರಲ್ಲಿ ಬಂದು ಆಸ್ತಿಗಾಗಿ ಜೀವವನ್ನೇ ತೆಗೆದ ಈ ಘಟನೆ ಅಥಣಿ ಜನತೆಯನ್ನು ಬೆಚ್ಚಿಬೀಳಿಸಿದೆ.”

About The Author