ತುಮಕೂರು: Tumakuru: ಮಧ್ಯಪ್ರಾಚ್ಯದಲ್ಲಿ ಯುದ್ಧವಾಗುತ್ತಿರುವ ಹಿನ್ನೆಲೆ, ಭಾರತದಲ್ಲೂ ಅದರ ಎಫೆಕ್ಟ್ ಜೋರಾಗಿದೆ. ಎಲ್ಪಿಜಿ ಗ್ಯಾಸ್ ಸಿಲಂಡರ್ ಸಿಗದೇ ಹೋಟೇಲ್ ಮಾಲೀಕರು ಪರದಾಡುತ್ತಿದ್ದಾರೆ. ಸಾಮಾನ್ಯ ಜನರು, ಆಟೋ ಚಾಲಕರು ಸೇರಿ ಹಲವು ಸಿಲಿಂಡರ್ಗಾಗಿ ಪರದಾಡುತ್ತಿದ್ದಾರೆ.
ಇದೇ ಸಂದರ್ಭದಿಂದ ಲಾಭ ಪಡೆಯಲು ಯತ್ನಿಸುತ್ತಿರುವ ಮೋಸಗಾರರು, ಇ-ಕೆವೈಸಿ ಹೆಸರಲ್ಲಿ ವಂಚನೆ ಮಾಡಲು ಮುಂದಾಗಿದ್ದಾರಂತೆ, ಜಿಲ್ಲಾಧಿಕಾರಿ ಕಚೇರಿಯಿಂದ ಈ ಪ್ರಕಟಣೆ ಮಾಡಿದ್ದು, ಎಲ್ಪಿಜಿ ಗ್ರಾಹಕರನ್ನು ಎಚ್ಚರಿಸಿದ್ದಾರೆ.
ತುಮಕೂರು ಜಿಲ್ಲೆಯ ಎಲ್ಲಾ ಗೃಹ ಬಳಕೆಯ LPG ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಹಾಗಾಗಿ
ಇ-ಕೆವೈಸಿ ಹೆಸರಿನಲ್ಲಿ ಮನೆ ಮನೆಗೆ ಬಂದು ಹಣ ವಸೂಲಿ ಮಾಡಲು ಶುರು ಮಾಡಿದ್ದಾರಂತೆ. ಹಾಗಾಗಿ ವಂಚಕರು ಬಂದು ಏಜೆನ್ಸಿ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ ಎಂದು, ಜಿಲ್ಲಾಧಿಕಾರಿ ಕಚೇರಿಯಿಂದ ಆಹಾರ ಇಲಾಖೆ ಉಪ ನಿರ್ದೇಶಕರು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಈ ಸಂದರ್ಭ ಬಳಸಿಕೊಂಡು ಕೆಲವರು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಅಧಿಕೃತ ಏಜೆನ್ಸಿಗಳ ಹೊರತಾಗಿ ಬೇರೆಯವರಿಗೆ ಹಣ ನೀಡಿ ವಂಚನೆಗೆ ಒಳಗಾಗಬೇಡಿ. ಯಾವುದೇ ಗೊಂದಲ ಇದ್ದಲ್ಲಿ ಜಿಲ್ಲಾ ಆಹಾರ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಎಂದು ತುಮಕೂರು ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಈ ರೀತಿ ನಿಮಗೂ ಅನುಭವವಾಗಿದ್ದಲ್ಲಿ ದೂರವಾಣಿ ಸಂಖ್ಯೆ 8553378925 ಕ್ಕೆ ಕರೆ ಮಾಡಲು ಸೂಚನೆ.




