Haveri: ಹಾವೇರಿಯಲ್ಲಿ ಮಹಿಳಾ ದಿನಾಚರಣೆ ಆಚರಣೆ: ನಿವೃತ್ತ ಸೈನಿಕರ ಮನೆಯವರಿಗೆ ಸನ್ಮಾನ

Haveri News: ಹಾವೇರಿ: ಹಾವೇರಿಯಲ್ಲಿ ಮಹಿಳಾ ದಿನಾಚರಣೆ ವಿಶೇಷವಾಗಿ ಆಚರಿಸಲಾಗಿದೆ. ಹಾವೇರಿಯ ಹಾನಗಲ್ನಲ್ಲಿ ಮಹಿಳಾ ದಿನಾಚರಣೆ ಆಚರಿಸಿದ್ದು, ಕರ್ನಾಟಕ ಟಿವಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯ ಬಗ್ಗೆ ವೈಭವಿ ಮಹಿಳಾ ಸಂಘದ ವತಿಯಿಂದ ಧನ್ಯವಾದ ಅರ್ಪಿಸಲಾಯಿತು.

ಇನ್ನು ಈ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಮನೆಯವರಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಿತು. ಈ ಕಾರ್ಯಕ್ರಮವನ್ನು ದಿವಂಗತ ಸಿಎಂ ಉದಾಸಿ ಅವರ ಧರ್ಮಪತ್ನಿ ನೀಲಮ್ಮ ಉದಾಸಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಣ್ಣು ಸಂಸಾರದ ಕಣ್ಣು. ಹಿಂದಿನ ಕಾಲದಲ್ಲಿ ಹೆಣ್ಣು ಮನೆ ಇಂದ ಹೊರಗೆ ಬರುವುದು ಬಹಳ ಕಷ್ಟವಿತ್ತು. ಈಗಿನ ಕಾಲದಲ್ಲಿ ಪ್ರತಿ ಯೊಂದರಲ್ಲಿ ಹೆಣ್ಣಿನ ಪಾತ್ರ ಮಹತ್ವದ್ದಾಗಿದೆ. ಬೇರೆ ದೇಶದಲ್ಲಿ ಹೆಣ್ಣಿಗೆ ಗೌರವ ಯಷ್ಟು ಕೊಡತಾರೋ ಗೊತ್ತಿಲ್ಲ ಆದ್ರೆ ನಮ್ಮ ದೇಶದಲ್ಲಿ ಹೆಣ್ಣಿಗೆ ಬಹಳ ಗೌರವ ಇದೆ. ಮಹಿಳೆ ತಾಯಿಯಾಗಿ ಸೊಸೆಯಾಗಿ. ಮಗಳಾಗಿ, ಹೆಂಡತಿ ಆಗಿ, ಪ್ರತಿಯೊಂದರಲ್ಲಿ ಮಹತ್ವ ಕಾರ್ಯ ನಿರ್ವಹಿಸುತ್ತಾಳೆ ಎಂದರು.

ಮಂಜುಳಾ ಮಡಿವಾಳರ ಅವರು ಮಾತನಾಡಿ, ನಮ್ಮ ದೇಶದ ರೈತ ಮತ್ತು ಸೈನಿಕರ ಪಾತ್ರ ಬಹಳ ದೊಡ್ಡದು. ಸ್ವಾತಂತ್ರ್ಯ ಕೊಡಿಸುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಾಗಿದೆ ಎಂದು ಹೇಳಿದರು.

ಹಾನಗಲ್ ತಾಲೂಕಿನ ದಿವಂಗತ ಬಸವತ್ತಪ್ಪ ಸುಣಗಾರ ಅವರ ಪತ್ನಿಯಾದ ಶಂಕುತಲಾ ಸುಣಗಾರ ಅವರಿಗೆ ಮಹಿಳಾ ಸಂಘ ದಿಂದ ಸನ್ಮಾನನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸೌಭಾಗ್ಯ ಉದಾಸಿ, ಉಪಾಧ್ಯಕ್ಷರಾದ ಲಲಿತ ಧಾರವಾಡ, ಕಾರ್ಯದರ್ಶಿ ಪ್ರತಿಭಾ ತೀರ್ಥರಾಜ್, ಸಹ ಕಾರ್ಯದರ್ಶಿ ಉಷಾ ಕಬ್ಬುರ್, ಖಜಾಂಜಿ ಮಂಜುಳಾ ಮಡಿವಾಳ, ಕಾರ್ಯದರ್ಶಿ ಸುನೀತಾ ಬಳ್ಳಾರಿ, ಮೊದಲಾದವರಿದ್ದರು.

About The Author