Health Tips: ಇಂದಿನ ಕಾಲದ ಹಲವರಿಗೆ ಮನೆಗೆ ಹಣ್ಣು ತೆಕೋಂಡು ಹೋಗಿ, ಸಿಪ್ಪೆ ಸುಲಿದು ತಿನ್ನೋದು ಕೂಡಾ ಉದಾಸೀನದ ಕೆಲಸ ಅಂದ್ರೆ ನೀವು ನಂಬಲೇಬೇಕು. ಹಾಗಾಗಿಯೇ ಅವರು ಜ್ಯೂಸ್ ಅಂಗಡಿಗೆ ಹೋಗಿ, ಜ್ಯೂಸ್ ಕುಡಿಯುತ್ತಾರೆ. ಆದರೆ ಜ್ಯೂಸ್ ಉತ್ತಮವೋ..? ಹಣ್ಣು ಉತ್ತಮವೋ..? ಆರೋಗ್ಯಕರವಾದದ್ದು ಯಾವುದು ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಹಣ್ಣಿನ ಸೇವನೆಯೇ ಉತ್ತಮ. ಹಣ್ಣಿನಲ್ಲಿ ನಾರಿನಂಶ ಇರುತ್ತದೆ. ನಾವು ಜ್ಯೂಸ್ ಮಾಡುವ ಸಂದರ್ಭದಲ್ಲಿ ಆ ಫೈಬರ್‌ನ್ನೇ ತೆಗೆದು, ಬರೀ ರಸವನ್ನೇ ಕುಡಿದರೆ, ಅದರಿಂದ ದೇಹಕ್ಕೆ ಸಿಗಬೇಕಾದ ಪೂರ್ತಿ ಪೋಷಕಾಂಶ ಸಿಗುವುದಿಲ್ಲ. ಹಾಗಾಗಿ ವೈದ್ಯರು ಜ್ಯೂಸ್ ಮಾಡಿ, ಹಣ್ಣಿನಲ್ಲಿರುವ ಪೋಷಕಾಂಶದ ಸತ್ವವನ್ನೇ ಹಾಳು ಮಾಡುವ ಬದಲು, ಹಣ್ಣು ಸೇವನೆ ಮಾಡಿ ಎನ್ನುತ್ತಾರೆ.
ಇನ್ನು ಅಂಗಡಿಯಲ್ಲಿ ಸಿಗುವ ಜ್ಯೂಸ್, ಪ್ಯಾಕ್ಡ್ ಜ್ಯೂಸ್, ಕ್ಯಾನ್‌ನಲ್ಲಿ ಸಿಗುವ ಜ್ಯೂಸ್ ಅಂತೂ ಸೇವಿಸಲೇಬೇಡಿ ಅಂತಾರೆ ವೈದ್ಯರು. ಏಕೆಂದರೆ, ಅಲ್ಲಿ ಯಾವ ರೀತಿಯಾಗಿ ತಯಾರಿಸಿರುತ್ತಾರೆ ಅನ್ನೋದು ಯಾರಿಗೂ ತಿಳಿದಿರುವುದಿಲ್ಲ. ಎಂಥ ನೀರು ಬಳಸುತ್ತಾರೆ ಅನ್ನೋದು ಕೂಡ ಯಾಾರಿಗೂ ತಿಳಿದಿರುವುದಿಲ್ಲ. ಅಲ್ಲದೇ, ಜ್ಯೂಸ್ ಕುಡಿಯದೇ ಬೇರೆ ದಾರಿ ಇಲ್ಲ ಎಂದಾದಲ್ಲಿ, ನೀವು ಮನೆಯಲ್ಲಿಯೇ ಜ್ಯೂಸ್ ತಯಾರಿಸಿ, ತಕ್ಷಣವೇ ಸೇವಿಸಬೇಕು. ಅದನ್ನು 5ನಿಮಿಷ ಇರಿಸಿ, ಮತ್ತೆ ಕುಡಿದರೂ, ಅದರಲ್ಲಿರುವ ಆರೋಗ್ಯಕರ ಅಂಶ ನಾಶವಾಗುತ್ತದೆ. ಆಮೇಲೆ ಆ ಜ್ಯೂಸನ್ನು ನೀವು ರುಚಿಗೆ ಮಾತ್ರ ಸೇವಿಸಬೇಕಾಗುತ್ತದೆ. ಹಾಗಾಗಿ ಜ್ಯೂಸ್ ಸೇವನೆ ಬದಲು, ಹಣ್ಣಿನ ಸೇವನೆ ಮಾಡಿ ಅಂತಾರೆ ವೈದ್ಯರು.




