Health Tips: ಅಂಜೂರವನ್ನು ಈ ರೀತಿಯಾಗಿ ಸೇವಿಸಿದ್ದಲ್ಲಿ ನಿಮ್ಮ ಆರೋಗ್ಯಾಭಿವೃದ್ಧಿ ಗ್ಯಾರಂಟಿ..

Health Tips: ಡ್ರೈಫ್ರೂಟ್ಸ್ಗಳಲ್ಲಿ ಉತ್ತಮ ಪೋಷಕಾಂಶಗಳಿರುತ್ತದೆ. ಅದನ್ನು ಸೇವಿಸಿದ್ರೆ, ನಮ್ಮ ಆರೋಗ್ಯವೂ ಚೆನ್ನಾಗಿರತ್ತೆ ಅಂತಾ ನಮಗೆಲ್ಲ ತಿಳಿದಿದೆ. ಅದೇ ರೀತಿ, ಈ ಡ್ರೈಫ್ರೂಟ್ಸ್‌ನಲ್ಲಿ 1 ಆದ ಅಂಜೂರದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.

  1. ಅಂಜೂರವನ್ನು ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುನ್ನ ತಿನ್ನಬೇಕು. ಪ್ರತಿದಿನ 1 ಅಂಜೂರ ತಿಂದರೂ ಸಾಕು. ಇದರಿಂದ ಮಲವಿಸರ್ಜನೆ, ಉದರ ಸಮಸ್ಯೆಗೆ ಪರಿಹಾರ ಸಿಗುತ್ತದೆ.
  2. ಉದರ ಸಮಸ್ಯೆ ಸರಿಯಾದರೆ, ಜೀರ್ಣಶಕ್ತಿ ಚೆನ್ನಾಗಿರುತ್ತದೆ. ಜೀರ್ಣಶಕ್ತಿ ಚೆನ್ನಾಗಿದ್ದರೆ, ನಮ್ಮ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.
  3. ಅಲ್ಲದೇ ಅಂಜೂರದ ಸೇವನೆಯಿಂದ ನಮ್ಮ ಮೂಳೆ ಗಟ್ಟಿಯಾಗಿರುತ್ತದೆ. ಏಕೆಂದರೆ, ಇದರಲ್ಲಿ ಭರಪೂರ ಕ್ಯಾಲ್ಶಿಯಂ ಇದ್ದು, ಇದು ನಮ್ಮ ಮೂಳೆ ಬಲವಾಗಿಡಲು ಸಹಕಾರಿಯಾಗಿದೆ.
  4. ಇನ್ನು ಪ್ರತಿದಿನ ನೆನೆಸಿದ ಅಂಜೂರ ತಿನ್ನುವುದರಿಂದ ನಮ್ಮ ಕೂದಲ ಆರೋಗ್ಯವೂ ಚೆನ್ನಾಗಿರುತ್ತದೆ. ಆರೋಗ್ಯಕರವಾಗಿ ಕೂದಲು ಬೆಳೆಯುತ್ತದೆ. ಕೂದಲ ಬುಡ ಬಲವಾಗಿ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
  5. ಇನ್ನು ಬಿಪಿ ಸಮಸ್ಯೆ, ಹೃದಯದ ಸಮಸ್ಯೆ ಇದ್ದವರು ಪ್ರತಿದಿನ ಅಂಜೂರ ಸೇವಿಸಿದರೆ, ಬಿಪಿ ಕಂಟ್ರೋಲಿನಲ್ಲಿರುತ್ತದೆ. ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ.

About The Author