Mandya News: ಮಂಡ್ಯ: ವಿಶ್ವ ಪ್ರಸಿದ್ದ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭ ವಾಗಿದ್ದು ಮಂಡ್ಯ ಜಿಲ್ಲಾ ಖಜಾನೆ ಯಿಂದ ವೈರಮುಡಿಯನ್ನ ಸರ್ಕಾರಿ ಗೌರವದೊಂದಿಗೆ ಬಿಗಿ ಭದ್ರತೆಯಲ್ಲಿ ಮೇಲುಕೊಟೆಗೆ ಕೊಂಡೊಯ್ಯಲಾಯಿತು.
ಖಜಾನೆಯಿಂದ ಜಿಲ್ಲಾಧಿಕಾರಿ ಡಾ.ಕುಮಾರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣೆ ಅವರು ತಲೆ ಮೇಲೆ ಹೊತ್ತು ತಂದು ಖಜಾನೆ ದ್ವಾರದಲ್ಲಿರಿಸಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯಕಾರ್ಯನಿರ್ವಣಾಧಿಕಾರಿ ಕೆ.ಆರ್ ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಂತರ ವೈರಮುಡಿಗೆ ನಗರದ ಲಕ್ಷ್ಮಿಜನಾರ್ಧನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೇಲು ಕೊಟೆಗೆ ಹೊಗುವ ದಾರಿಯುದ್ದಕ್ಕೂ ಗ್ರಾಮಗಳಲ್ಲಿ ಜನ ತಮ್ಮ ನೆಚ್ಚಿನ ದೇವರಿಗೆ ಪೂಜೆ ಸಲ್ಲಿ ಸಲ್ಲಿಸುತ್ತಾರೆ.
ಸಂಜೆ ವೇಳೆಗೆ ವೈರಮುಡಿ ಮೇಲುಕೊಟೆ ತಲುಪುತ್ತದೆ ವೈರಮುಡಿಗೆ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪರ್ಕಾವಣೆ ನಡೆಸಿ ದೇವರಿಗೆ ತೊಡಿಸಿ ಮೇಲುಕೋಟೆಯ ಪ್ರಮುಖ ಬೀದಿಯಲ್ಲಿ ಉತ್ಸವ ಜರುಗಲಿದೆ




