Bollywood News: ಖ್ಯಾತ ಬಾಲಿವುಡ್ ಕೋರಿಯೋಗ್ರಾಫರ್ ರೆಮೋ ಡಿಸೋಜಾ ನೀಲಮಣಿ ಉಂಗುರ ಧರಿಸಿ, ತಮಗಾದ ಕಿರಿಕಿರಿಯ ಬಗ್ಗೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಾವು-ನೀವೆಲ್ಲ ಬಾಲಿವುಡ್‌ನಲ್ಲಿ ಹಲವರು ನೀಲಮಣಿ ಉಂಗುರ, ಬ್ರಾಸ್‌ಲೆಟ್ ಹಾಕಿರುವುದನ್ನು ನೋಡಿರುತ್ತೀರಿ. ಸಲ್ಮಾನ್ ಖಾನ್ ಈ ಬ್ರಾಸ್‌ಲೆಟ್ ಧರಿಸಿ, ಹೆಚ್ಚು ಪ್ರಖ್ಯಾತರಾಗಿದ್ದಾರೆ. ಆದರೆ ಇದು ಸಾಮಾನ್ಯ ಹರಳಲ್ಲ. ಬದಲಾಗಿ ತಕ್ಷಣ ಪರಿಣಾಮ ತೋರಿಸುವ ಹರಳು.
ಇದನ್ನು ಧರಿಸಿದ ತಕ್ಷಣ ಕಿರಿಕಿರಿಯಾದರೆ, ಇದು ಆ ಕ್ಷಣವೇ ತೆಗೆದಿರಿಸಬೇಕು. ಇಲ್ಲದಿದ್ದಲ್ಲಿ, ಇದು ನಿಮ್ಮ ಜೀವಕ್ಕೇ ಹಾನಿ ಮಾಡಬಹುದು. ಹಲವರು ಇದನ್ನು ಧರಿಸಿ, ಕೋಟಿ ಕೋಟಿ ಸಂಪಾದನೆ ಮಾಡಿದರೆ, ಇನ್ನು ಕೆಲವರು ಅದನ್ನು ಧರಿಸಿ, ಇರುವ ಹಣ ಹೋಗಿ, ಭಿಕ್ಷುಕರಾದವರೂ ಇದ್ದಾರೆ. ಹಾಗಾಗಿ ಜಾತಕ ಫಲಗಳನ್ನು ಪರಿಶೀಲಿಸಿ, ಆ ಹರಳನ್ನು ಧರಿಸಬೇಕು.
ಆದರೆ ರೆಮೋ ಯಾರೋ ಹೇಳಿದರೆಂದು ಆ ನೀಲಮಣಿ ರತ್ನದ ಉಂಗುರ ಧರಿಸಿ, ಡಾನ್ಸ್ ಶೋಗೆ ಹೋಗಿದ್ದರಂತೆ. ಆದರೆ ಅವರಿಗೆ ಅಂದು ಸುಮ್ಮ ಸುಮ್ಮನೆ ಕಿರಿಕಿರಿಯಾಗುತ್ತಿತ್ತಂತೆ. ಮಾಧುರಿ ದೀಕ್ಷಿತ್ ಬಳಿ ಈ ಬಗ್ಗೆ ಹೇಳಿದಾಗ, ಆಕೆ ಉಂಗುರ ತೆಗೆದಿಡಲು ಸಲಹೆ ನೀಡಿದರಂತೆ. ಹಾಗಾಗಿ ತನ್ನ ಅಸಿಸ್ಟೆಂಟ್ ಬಳಿ ಈ ಉಂಗುರ ನೀಡಿದರು.
ಆತ ಅರ್ಧ ಗಂಟೆ ಬಳಿಕ ಆ ಉಂಗುರ ಹಿಡಿದು, ರೆಮೋ ಅವರತ್ತ ಓಡಿ ಬಂದು. ನನಗೆ ಈ ಉಂಗುರ ಹಿಡಿಯಲಾಗುತ್ತಿಲ್ಲ. ನೀವೇ ತೆಗೋಳ್ಳಿ ಎಂದನಂತೆ. ಬಳಿಕ ಅದನ್ನು ವ್ಯಾನಿಟಿಬಸ್‌ನಲ್ಲಿ ಇರಿಸಿದರಂತೆ. ಹಾಗಾಗಿ ರೆಮೋ ಅವರು ಈ ಬಗ್ಗೆ ಮಾತನಾಡಿ, ನೀವು ಯಾವುದೇ ಉಂಗುರ ಧರಿಸದೇ ಇದ್ದರೂ ಪರ್ವಾಗಿಲ್ಲ. ಆದರೆ ಈ ರೀತಿ ಜಾತಕಕ್ಕೆ ಮ್ಯಾಚ್ ಆಗದ ಉಂಗುರ ಧರಿಸಿ, ನಿಮ್ಮ ಜೀವನ ಹಾಳು ಮಾಡಿಕ“ಳ್ಳಬೇಡಿ ಎಂದು ಸಲಹೆ ನೀಡುತ್ತಾರೆ.




