Sandalwood: ಇಂದು ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಸ್ಯಾಂಡಲ್‌ವುಡ್ ನಟ ಉಪೇಂದ್ರ

Sandalwood: ಇಂದು ಏಪ್ರಿಲ್ 1. ಇಷ್ಟು ವರ್ಷ ಈ ದಿನವನ್ನು ಮೂರ್ಖರ ದಿನ ಅಂತಾ ಕರಿತಿದ್ವಿ. ಎಷ್ಟೋ ಜನ ಏಪ್ರಿಲ್ 1ಕ್ಕೆ ತಮಾಷೆ ಮಾಡಿ, ಏಪ್ರಿಲ್ ಫೂಲ್ ಎಂದು ಕೂಗುತ್ತಾರೆ. ಕೆಲವು ತಮಾಷೆಗಳಿಗೆ ಜೀವವೂ ಬಲಿಯಾಗಿರುವ ಉದಾಹರಣೆಯೂ ಇದೆ. ಆದ್ರೆ ಇಂದು ಪ್ರೆಸ್‌ಮೀಟ್ ಮಾಡಿ, ಮಾತನಾಡಿರುವ ನಟ, ನಿರ್ದೇಶಕ ಉಪೇಂದ್ರ, ನಾವು ಏಪ್ರಿಲ್ 1ನ್ನ ಬುದ್ಧಿವಂತರ ದಿನ ಮಾಡೋಣಾ ಎಂದು ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಆ್ಯಪ್ ಲಾಂಚ್ ಮಾಡಿದ್ದಾರೆ. ಇಷ್ಟು ವರ್ಷ ನಾವು ಏಪ್ರಿಲ್ 1ನ್ನು ಫೂಲ್ಸ್ ಡೇ ಅಂತಾ ಕರಿತಿದ್ವಿ. ಆದರೆ ಇಂದು ನಾವು ಈ ದಿನವನ್ನು ಬುದ್ಧಿವಂತರ ದಿನ ಮಾಡೋಣ.ಒಬ್ಬರ ಕಾಲ್ ಇನ್ನೊಬ್ಬರು ಎಳೆದು ಗೇಲಿ ಮಾಡೋ ದಿನ , ಈ ದಿನಾನ ಒಬ್ಬರ ಕೈ ಇನ್ನೊಬ್ಬರು ಹಿಡಿದು ಮೇಲೆ ಎತ್ತೋ ಬುದ್ಧಿಶಾಲಿ ದಿನ ಮಾಡೋಣ ಎಂದು ಉಪೇಂದ್ರ ಹೇಳಿದ್ದಾರೆ.

ಇನ್ನು ಪ್ರಜಾಕೀಯ ಆ್ಯಪ್ ಬಿಡುಗಡೆ ಮಾಡಿದ್ದು, ಇದರಲ್ಲಿ ಏನೇನು ವಿಶೇ?ವಿದೆ ಎಂದು ತಿಳಿಯಲು ಉಪೇಂದ್ರ ಅವರ ಎಕ್ಸ್ ಖಾತೆ ವೀಕ್ಷಿಸಿ.

About The Author