Bollywood: ಭಕ್ತರು ತಿಂದ ಪ್ಲೇಟು-ಲೋಟ ವಾಶ್ ಮಾಡಿದ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ

Bollywood: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸದ್ಯ ಬಾಲಿವುಡ್‌ನಿಂದ ದೂರ ಉಳಿದು, ಹಾಲಿವುಡ್‌ನಲ್ಲಿ ಪತಿ ನಿಕ್ ಜತೆ ನೆಲೆಸಿದ್ದಾರೆ. ಪುತ್ರಿ ಮಾಲತಿ ಜತೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಭಾರತಕ್ಕೆ ಬಂದಾಗ, ದೇವಸ್ಥಾನಗಳಿಗೆ ಭೇಟಿ ನೀಡಿ, ಸೇವೆ ಸಲ್ಲಿಸುತ್ತಾರೆ.

ಕಳೆದ ಬಾರಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ಪತಿ ಮತ್ತು ಮಗಳ ಸಮೇತ ರಾಮನ ದರ್ಶನ ಮಾಡಿ, ಪೂಜೆ ಸಲ್ಲಿಸಿದ್ದರು. ಇದೀಗ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ಇಲ್ಲಿ ಬರುವ ಭಕ್ತರು, ಹಲವು ರೀತಿಯಲ್ಲಿ ಸೇವೆ ಸಲ್ಲಿಸಬುಹುದು. ಎಷ್ಟೇ ಶ್ರೀಮಂತರಾಗಿದ್ದರು, ಇಲ್ಲಿ ಭೇಟಿ ನೀಡುವ ಭಕ್ತರು, ಭಕ್ತರು ಊಟ ಮಾಡಿದ ತಟ್ಟೆ-ಲೋಟ ತೆಗೆಯುತ್ತಾರೆ. ಅದನ್ನು ಕ್ಲೀನ್ ಮಾಡುತ್ತಾರೆ. ಚಪ್ಪಲಿ ಕಾಯುತ್ತಾರೆ. ಹೀಗೆ ಹಲವು ಕೆಲಸಗಳನ್ನು ಬೇಧ ಭಾವವಿಲ್ಲದೇ, ಮೇಲು-ಕೀಳು ಎನ್ನದೇ ಮಾಡುತ್ತಾರೆ.

ಅದೇ ರೀತಿ ಪ್ರಿಯಾಂಕಾ ಛೋಪ್ರಾ ಕೂಡ ಭಕ್ತರು ತಿಂದ ಪ್ಲೇಟ್-ಲೋಟ ಕ್ಲೀನ್ ಮಾಡಿ, ಸೇವೆ ಸಲ್ಲಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋಗೆ ತರಹೇವಾರಿ ಕಾಮೆಂಟ್ಸ್ ಬರುತ್ತಿದೆ. ಕೆಲವರು ಈಕೆಯ ಕೆಲಸವನ್ನು ಉತ್ತಮ ಎಂದಿದ್ದಾರೆ. ತನ್ನ ಪದ್ಧತಿ ಮರೆಯದೇ ಬದುಕುತ್ತಿದ್ದಾಳೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಬರೀ ಡ್ರಾಮಾ, ಆಕೆ ಬರೀ 1 ಪ್ಲೇಟ್ ವಾಶ್ ಮಾಡಿದ್ದು ಎಂದು ಹೀಯಾಳಿಸಿದ್ದಾರೆ.

About The Author