Recipe: ಮೈದಾ ಬಳಸದೇ ಮಾಡುವ ಹೆಲ್ದಿ ಮೋಮೋ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಗೋದಿ ಹುಡಿ, ಉಪ್ಪು, ಎಣ್ಣೆ, ನೀರು.

ಹೂರಣಕ್ಕೆ ಎಣ್ಣೆ, ಈರುಳ್ಳಿ, ಕ್ಯಾಬೇಜ್, ಕ್ಯಾರೇಟ್ ತುರಿ, ಕ್ಯಾಪ್ಸಿಕಂ, ಹಸಿಮೆಣಸು, ಉಪ್ಪು, ಅವಶ್ಯಕತೆ ಇದ್ದಲ್ಲಿ ಗರಂ ಮಸಾಲೆ ಸೇರಿ ಯಾವುದೇ ಖಾರ ಪದಾಾರ್ಥ ಸೇರಿಸಿ.

ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಕ್ಯಾರೇಟ್, ಕ್ಯಾಬೇಜ್ ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ, ಹುರಿಯಿರಿ. ನಂತರ ಉಪ್ಪು, ಗರಂ ಮಸಾಲೆ, ಹಾಕಿ ಮಿಕ್ಸ್ ಮಾಡಿ. ಹೂರಣ ಬೆಂದ ಬಳಿಕ , ತಣ್ಣಗಾಗಲು ಬಿಡಿ.

ನಂತರ ಗೋದಿ ಹುಡಿ, ನೀರು, ಉಪ್ಪು, ಎಣ್ಣೆ ಹಾಕಿ ಚಪಾತಿ ಹಿಟ್ಟಿನಂತೆ ನಾದಿ. ಸಣ್ಣ ಸಣ್ಣ ಪೂರಿಯಾಕಾರದಲ್ಲಿ ಲಟ್ಟಿಸಿ, ಅದರಲ್ಲಿ ಹೂರಣ ತುಂಬಿಸಿ, ಮೋಮೋ ಆಕಾರ ನೀಡಿ, ಹಬೆ ಬರಿಸಿದರೆ, ಹೆಲ್ದಿ ಮೋಮೋ ರೆಡಿ. ಅದರ ಮೇಲೆ ಖಾರದ ಪುಡಿ, ಕೊತ್ತೊಂಬರಿ ಸೊಪ್ಪು ಉದುರಿಸಿ, ಸಾಸ್ ಜತೆ ಸರ್ವ್ ಮಾಡಿ.

About The Author