Recipe: ಈ ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಮಖಾನಾ ಕುಲ್ಫಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಮಖಾನಾ, 10ರಿಂದ 15 ಬಾದಾಮಿ ಮತ್ತು ಗೋಡಂಬಿ, ಸ್ವಲ್ಪ ಕೇಸರಿ ದಳ, 1 ಸ್ಪೂನ್ ಹಾಲಿನ ಪುಡಿ, 1 ಲೋಟ ಹಾಲು, ಅಗತ್ಯ ಜೇನುತುಪ್ಪ, ಏಲಕ್ಕಿ ಪುಡಿ. ನಿಮಗೆ ಬೇಕಾದ್ರೆ ನೀವು ಪಿಸ್ತಾ, ಖರ್ಜೂರ ಸೇರಿ ಯಾವುದೇ ಬೇರೆ ಡ್ರೈಫ್ರೂಟ್ಸ್ ಬಳಸಬಹುದು.

ಮಾಡುವ ವಿಧಾನ: ಮಿಕ್ಸಿ ಜಾರ್‌ಗೆ ಮಖಾನಾ, ಕಾಜು-ಬಾದಾಮ್, ಕೇಸರಿ ದಳ, ಹಾಕಿ ಪುಡಿ ಮಾಡಿ. ಬಳಿಕ ಹಾಲಿನ ಪುಡಿ, ಜೇನುತುಪ್ಪ, ಹಾಲು, ಏಲಕ್ಕಿ ಪುಡಿ ಹಾಕಿ ರುಬ್ಬಿ.

ಬಳಿಕ ಕುಲ್ಫಿ ಮೋಲ್ಡ್‌ಗೆ ಹಾಕುವಾಗ ಡ್ರೈಫ್ರೂಟ್ಸ್ ಕಟ್ ಮಾಡಿ ಸೇರಿಸಿ, ಹಾಕಿ. ನಂತರ 6ರಿಂದ 7 ಗಂಟೆ ಫ್ರೀಜರ್‌ನಲ್ಲಿರಿಸಿದ್ರೆ, ಕುಲ್ಫಿ ರೆಡಿ. ಇದಕ್ಕೆ ಸಕ್ಕರೆಯಾಗಲಿ, ಕಾರ್ನ್‌ಫ್ಲೋರ್ ಆಗಲಿ ಯಾವುದೇ ಬೇರೆ ವಸ್ತು ಉಪಯೋಗಿಸದಿದ್ದರೂ, ಇದು ರುಚಿಯಾಗಿರತ್ತೆ.

About The Author