Viral Video: ಸಿಂಪಲ್ ಆಗಿ ನೆಲದ ಮೇಲೆ ಮಲಗಿದ ನಟ ಪ್ರಭುದೇವ: ವೀಡಿಯೋ ವೈರಲ್

Viral News: ನಟ, ಡಾನ್ಸರ್ ಪ್ರಭುದೇವ ಅವರು ತೋಟದಲ್ಲಿ ಸಮಯ ಕಳೆದಿದ್ದು, ಅಲ್ಲೇ ಇದ್ದ ಕಟ್ಟೆಯ ಮೇಲೆ ಮಲಗಿದ ವೀಡಿಯೋ ವೈರಲ್ ಆಗಿದೆ. ಅಷ್ಟು ಪ್ರಸಿದ್ಧಿ ಇದ್ದರೂ ಈ ವ್ಯಕ್ತಿಯ ಸರಳತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೀಡಿಯೋದಲ್ಲಿ ಪ್ರಭುದೇವ ತಮ್ಮ ಹಳ್ಳಿಗೆ ಭೇಟಿ ನೀಡಿದ್ದು, ಅಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳ ಜತೆ ಅವರು ತಮ್ಮ ಹಳ್ಳಿಗೆ ಹೋಗಿ, ಅಲ್ಲಿ ತೋಟದಲ್ಲಿ ಸುತ್ತಾಡಿ ಬಳಿಕ, ಮನೆಯ ಜಗುಲಿ ಮೇಲೆ ಕುಳಿತು, ಎಳನೀರಿನ ಸ್ವಾದ ನೋಡಿದ್ದಾರೆ. ಬಳಿಕ ಅಲ್ಲೇ ಸ್ವಲ್ಪ ಕಾಲ ನೆಲದ ಮೇಲೆ ವಿಶ್ರಮಿಸಿದ್ದಾರೆ.

ಪ್ರಭುದೇವ ಸಾಮಾನ್ಯ ವ್ಯಕ್ತಿಯ ಹಾಗೆ ಜೀವನ ಮಾಡುತ್ತಿರುವುದನ್ನು ಕಂಡು ಹಲವರು ಸಂತೋಷ ವ್ಯಕ್ತಪಡಿಸಿದ್ದಾರೆ. ಸರಳತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

About The Author