Haveri News: ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಪೆಸ್ ಕಾಲೇಜಿನ ವಿದ್ಯಾರ್ಥಿ ಆರತಿ ಅನ್ವೇರಿ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಸೆಕೆಂಡ್ ಪಿಯುಸಿ ಫಲಿತಾಂಶ ಬಂದಿದ್ದು, ಇದರಲ್ಲಿ ಜಿಲ್ಲೆಗೆ ಟಾಪರ್ ಆಗಿರುವ ಆರತಿ ಅನ್ವೇರಿ ಕಾಲೇಜಿನ ಪ್ರಾಂಶುಪಾಲಕರಿಗೆ, ಉಪನ್ಯಾಸಕರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾಳೆ.
ಬಳಿಕ ಮಾತನಾಡಿರುವ ಆರತಿ, ನನ್ನ ಫಲಿತಾಂಶವನ್ನು ನಮ್ಮ ಅಪ್ಪ-ಅಮ್ಮನಿಗೆ ಕಾಲೇಜಿನ ಉಪನ್ಯಾಸಕರಿಗೆ ಸಮರ್ಪಣೆ ಮಾಡುವೆ. ಕಾಲೇಜಿನಲ್ಲಿ ರಾತ್ರಿ 8.30 ತನಕ ನನಗೆ ಅಧ್ಯಯನ ಮಾಡಿಸುತ್ತಿದ್ದರು. ಜೊತೆಗೆ ಮನೆಯಲ್ಲಿ 3-4 ಗಂಟೆ ಅಧ್ಯಯನ ಮಾಡುತ್ತಿದ್ದೆ. ಅಮ್ಮ- ಅಪ್ಪಾ ಪ್ರಾವಿಜನಲ್ ಸ್ಟೋರ ನಡೆಸುತ್ತಿದ್ದರು ನನ್ನ ಓದಿಗೆ ಎಂದು ಅಡ್ಡಿ ಪಡಿಸಿರಲಿಲ್ಲ. ಬೋರ್ಡ್ಗಿಂತಾ ಕಾಂಫಿಟೇಟಿವ್ಗೆ ಹೆಚ್ಚು ಕಾನ್ಸಂಟ್ರೇಶನ್ ಮಾಡುತ್ತಿದ್ದೆ. ಸಿಕ್ಕ ಸಮಯವನ್ನು ಸರಿಯಾಗಿ ಟಿಚೇರ್ ಬಳಿಸಿಕೊಂಡು ಉತ್ತಮ ಫಲಿತಾಂಶ ಬರಲು ಕಾರಣರಾಗಿದ್ದಾರೆ ಎಂದಿದ್ದಾಳೆ.




