Health Tips: ನಾವು ಪ್ರತಿದಿನ ಬೆಳಿಗ್ಗೆ ಎದ್ದಾಗ ನಮ್ಮ ದೇಹ ಚೈತನ್ಯಭರಿತವಾಗಿರಬೇಕು. ಆಗ ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ನೀವು ಮಲಗೆದ್ದ ಬಳಿಕವೂ ನಿಮಗೆ ಸುಸ್ತಾಗುತ್ತಿದೆ. ದೇಹದಲ್ಲಿ ಶಕ್ತಿ ಇಲ್ಲ ಎಂದೆನ್ನಿಸಿದರೆ, ನಮ್ಮ ಆರೋಗ್ಯ ಉತ್ತಮವಾಗಿಲ್ಲ ಎಂದರ್ಥ. ಆದರೆ ನಾವು ಬೆಳಿಗ್ಗೆ ಎದ್ದ ತಕ್ಷಣ 5 ನಿಯಮಗಳನ್ನು ಪಾಲಿಸಿದರೆ, ನಮ್ಮ ಆರೋಗ್ಯದಲ್ಲಿ ಅಭಿವೃದ್ಧಿ ಕಾಣಬಹುದು.
- ಬೆಳಿಗ್ಗೆ ಎದ್ದ ತಕ್ಷಣ, 1 ನಿಮಿಷ ಸುಮ್ಮನೆ ಕುಳಿತುಕ`ಳ್ಳಿ. ಹಾಗೆ ಕುಳಿತಾಗ, ನಿಮ್ಮ ಜೀವನದಲ್ಲಿ ನೀವು ಏನನ್ನು ಸಾಧಿಸಬೇಕು ಅಂತಿದ್ದೀರಿ ಅದರ ಬಗ್ಗೆ ಯೋಚಿಸಿ. ಬಳಿಕ ಆ ಕೆಲಸಕ್ಕೆ ಹೇಗೆ ತಯಾರಾಗಬೇಕು. ನಾನು ಇಂದೇನೇನು ಕೆಲಸ ಮಾಡಬೇಕು ಎಂದು ಮನಸ್ಸಿನಲ್ಲೇ ಯೋಜನೆ ರೂಪಿಸಿ. ಏಕೆಂದರೆ ನೀವು ಏನು ಅಂದುಕ“ಳ್ಳುತ್ತೀರೋ, ಅದೇ ಆಗುತ್ತೀರಿ. ಹಾಗಾಗಿ ಉದಾಸೀನ ಮಾಡದೇ, ನಿಮ್ಮ ಗುರಿ ತಲುಪಲು ಬೇಕಾಗುವುದನ್ನು ಯೋಚಿಸಿ.
- ಬೆಳಿಗ್ಗೆ ಎದ್ದ ತಕ್ಷಣ, ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡಬೇಕು. ನೆನೆ ಹಾಕಿದ ಚೀಯಾ ಸೀಡ್ಸ್ ಸೇವನೆ ಅತೀ ಉತ್ತಮ. ಆದರೆ ನಿಮಗೆ ಲೋ ಬಿಪಿ ಇದ್ದರೆ ನೀವು ಚೀಯಾ ಸೀಡ್ಸ್ ಸೇವಿಸುವಂತಿಲ್ಲ.
- ಅನಲೋಮ ವಿಲೋಮ ಮಾಡಬೇಕು. ಬೆಳಿಗ್ಗೆ ಎದ್ದು ನಾವು ಧ್ಯಾನ ಮಾಡಬೇಕು. ಪ್ರಾಣಾಯಾಮ ಮಾಡಬೇಕು. ಯೋಗ ಮಾಡಬೇಕು., ಇದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುವುದಲ್ಲದೇ, ಮನಸ್ಸು ಕೂಡ ಶಾಂತವಾಗಿರುತ್ತದೆ.
- ಸೂರ್ಯನ ತಿಳಿಬಿಸಿಲಿಗೆ ನಿಂತು ವಿಟಾಮಿನ್ ಡಿ ಪಡೆಯಿರಿ. ಇದರಿಂದ ನಿಮ್ಮ ಶರೀರದಲ್ಲಿ ಶಕ್ತಿ ಬರುವುದಲ್ಲದೇ, ನಿಮ್ಮ ತ್ವಚೆ ಕೂಡ ಉತ್ತಮವಾಗಿರುತ್ತದೆ.
- ಬೆಳಿಗ್ಗೆ ಬೇಗ ಸ್ನಾನ ಮಾಡಿ, ತಿಂಡಿ ಮಾಡಿ. ಇದರಿಂದ ನಿಮ್ಮ ದಿನವೆಲ್ಲ ಫ್ರೆಶ್ ಆಗಿರುತ್ತದೆ. ಅದಕ್ಕೂ ಮುನ್ನ ಕಹಿ ಕಶಾಯದ ಸೇವನೆ ಅಥವಾ ಆರೋಗ್ಯಕರ ಪೇಯದ ಸೇವನೆ ಮಾಡಿ.
ನೀವು ಇದೆಲ್ಲ ಮಾಡಲು ಬೆಳಿಗ್ಗೆ ಬೇಗ ಏಳಬೇಕಾಗುತ್ತದೆ. ಏಕೆಂದರೆ, ಈ ಕೆಲಸವೆಲ್ಲ ಮಾಡುವಾಗ ನಿಮ್ಮ ಮನಸ್ಸು ಶಾಂತವಾಗಿರಬೇಕು. ಗಡಿಬಿಡಿಯಲ್ಲಿ ಇದೆಲ್ಲ ಮಾಡಿದರೆ ಅದರಿಂದೇನೂ ಪ್ರಯೋಜನವಾಗುವುದಿಲ್ಲ.




