ಅಕ್ಷಯ ತೃತೀಯದಂದು ಚಿನ್ನದ ಬದಲು ಇದನ್ನು ಕೂಡ ಮನೆಗೆ ತಂದರೂ ಲಕ್ಷ್ಮೀ ಕೃಪೆ ನಿಮ್ಮದಾಗಬಹುದು..

Spiritual: ಇನ್ನು 1 ವಾರ ಕಳೆದರೆ ಅಕ್ಷಯ ತೃತೀಯ ಬರುತ್ತಿದೆ. ಏಪ್ರಿಲ್ 19 ಭಾನುವಾರದಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಈ ದಿನ ಹಲವು ಶುಭಕಾರ್ಯಗಳನ್ನು ಮಾಡುತ್ತಾರೆ. ಗೃಹಪ್ರವೇಶ, ನಾಮಕರಣ, ಹೀಗೆ ಹಲವು ಶುಭಕಾರ್ಯಗಳನ್ನು ಮಾಡಲು ಅಕ್ಷಯ ತೃತೀಯ ಹೇಳಿ ಮಾಡಿಸಿದ ದಿನ. ಏಕೆಂದರೆ, ಈ ದಿನ ಏನೇ ಶುಭ ಮಾಡಿದರೂ, ಅದು ಅಕ್ಷಯವಾಗುತ್ತದೆ ಅನ್ನೋ ನಂಬಿಕೆ ಇದೆ.

ಅಲ್ಲದೇ ಹಲವರು ಅಕ್ಷಯ ತೃತೀಯದ ದಿನವೇ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಇದರಿಂದ ಮಕ್ಕಳಿಗೆ ಉತ್ತಮ ವಿದ್ಯೆ ಸಿಕ್ಕಿ, ಅವರ ಭವಿಷ್ಯ ಉಜ್ವಲವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಇದೆಲ್ಲದಕ್ಕಿಂತ ಹೆಚ್ಚಿನ ಜನ ಅಕ್ಷಯ ತೃತೀಯದ ದಿನ ಮಾಡುವ ಕೆಲಸ ಅಂದ್ರೆ ಅದು ಚಿನ್ನ-ಬೆಳ್ಳಿ ಖರೀದಿ. ಈ ದಿನ ಏನೇ ಖರೀದಿಸಿದರೂ ಅದು ಅಕ್ಷಯವಾಗುತ್ತದೆ ಅನ್ನುವ ಕಾರಣಕ್ಕೆ, ಅಕ್ಷಯವಾಗುವುದಾದರೇ ಶ್ರೀಮಂತಿಕೆಯೇ ಅಕ್ಷಯವಾಗಲಿ ಎಂದು ಚಿನ್ನ -ಬೆಳ್ಳಿ ಖರೀದಿ ಮಾಡುತ್ತಾರೆ.

ಆದರೆ ಈಗ ಚಿನ್ನ-ಬೆಳ್ಳಿ ಖರೀದಿ ಅಷ್ಟು ಸುಲಭವಲ್ಲ. ಏಕೆಂದರೆ, ಚಿನ್ನದ ದರ ಗಗನಕ್ಕೇರಿದೆ. ಗ್ರಾಮ್‌ಗೆ 15 ಸಾವಿರ ದಾಟಿದೆ. ಹೀಗಿರುವಾಗ ಹಲವರಿಗೆ ಚಿನ್ನ ಖರೀದಿ ಕಷ್ಟದ ವಿಷಯ. ಆದರೂ ನಿಮ್ಮ ಶ್ರೀಮಂತಿಕೆ ಹೆಚ್ಚಿಸಲು, ಲಕ್ಷ್ಮೀ ಕೃಪೆ ಇರಲು ನೀವು ಮನೆಗೆ ಕೆಲ ವಸ್ತುಗಳನ್ನು ತರಬಹುದು. ಅದನ್ನು ತಂದರೂ ನಿಮ್ಮ ಶ್ರೀಮಂತಿಕೆ ಹೆಚ್ಚಾಗುತ್ತದೆ.

ಅರಿಶಿನ-ಕುಂಕುಮ: ಅರಿಶಿನ-ಕುಂಕುಮ ಅತೀ ಕಡಿಮೆ ಬೆಲೆಗೆ ಸಿಗುವ ವಸ್ತು. ಅರಿಶಿನ-ಕುಂಕುಮವೂ ಚಿನ್ನ-ಬೆಳ್ಳಿಗೆ ಸಮ. ಹಾಗಾಗಿ ಇದನ್ನು ನೀವು ಮನೆಗೆ ತಂದರೂ ನಿಮ್ಮ ಮೇಲೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಮನೆಯಲ್ಲಿ ಯಾವುದಾದರೂ ಮಂಗಳ ಕಾರ್ಯನಡೆಯುವುದು ಬಾಕಿ ಇದ್ದರೆ, ಅದು ಪೂರ್ಣವಾಗುತ್ತದೆ.

ಅಕ್ಕಿ: ಅಕ್ಕಿ ಅನ್ನೋದು ಲಕ್ಷ್ಮೀಯ ಸಂಕೇತವೇ. ಧಾನ್ಯ ಲಕ್ಷ್ಮೀ ಅಂತ ಕರಿಯೋದು ಇದೇ ಕಾರಣಕ್ಕೆ. ಈ ಧಾನ್ಯ ಲಕ್ಷ್ಮೀಯನ್ನು ನೀವು ಅಕ್ಷಯ ತೃತೀಯದಂದು ಮನೆಗೆ ತಂದರೆ, ಮನೆಯ ಅಭಿವೃದ್ಧಿ ಖಚಿತ ಅನ್ನೋ ನಂಬಿಕೆ ಇದೆ.

ಪುಸ್ತಕ: ವಿದ್ಯಾ ಲಕ್ಷ್ಮೀ ಆಗಿರುವ ದೇವಿಯನ್ನು ಈ ದಿನ ಬರ ಮಾಡಿಕ“ಲ್ಳಬಹುದು. ಹಾಗಾಗಿ ಅಕ್ಷಯ ತೃತೀಯದಂದು ಪುಸ್ತಕ ಖರೀದಿಸಿ, ಆ ಪುಸ್ತಕದಲ್ಲಿ ಸ್ವಲ್ಪ ಬರೆಯಬೇಕು. ಇದು ಕೂಡ ವಿದ್ಯಾರ್ಥಿ ಜೀವನಕ್ಕೆ ಉತ್ತಮ.

ತುಳಸಿಗಿಡ: ತುಳಸಿಗಿಡವನ್ನು ಕೂಡ ನೀವು ಈ ಶುಭದಿನದಂದು ಮನೆಗೆ ತಂದು ನೆಡಬಹುದು. ಇದರಿಂದ ಮನೆಯ ಅಭಿವೃದ್ಧಿಯಾಗುತ್ತದೆ.

About The Author