Sirsi News: ಭೀಮ ಘರ್ಜನೆ ಸಂಘಟನೆಯಿಂದ ಅದ್ದೂರಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

Sirsi News: ಭೀಮಘರ್ಜನೆ ಸಂಘಟನೆಯ ವತಿಯಿಂದ 135ನೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ, ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಲಿದೆ.

ಸಂಜೆ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಸಭಾಭವನದಲ್ಲಿ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಭೀಮಣ್ಣ ನಾಯ್ಕ್ ನೆರವೇರಿಸಿದರು.

ಸಂಘಟನೆ ಜಿಲ್ಲಾ ಅಧ್ಯಕ್ಷ ಅರ್ಜುನ ಮಿoಟಿ ಅಧ್ಯಕ್ಷತೆ ವಹಿಸಿದ್ದರು.ಸಭಾ ಕಾರ್ಯಕ್ರಮದ ನಂತರ ಅಂಬೇಡ್ಕರ್ ಭವನದಿಂದ ಭೀಮಯಾತ್ರೆ ಗೆ ಭೀಮಣ್ಣ ನಾಯ್ಕ್ ಚಾಲನೆ ನೀಡಿದರು.

ಅಂಬೇಡ್ಕರ್ ಭವನದಿಂದ ಆರಂಭವಾಗಿ ಶಿರಸಿ ನಗರದ ಪ್ರಮುಖ ಬೀದಿಗಳಲ್ಲಿ ಭೀಮಯಾತ್ರೆ ಸಾಗಿದ್ದು ವಿವಿಧ ಬಂಡಿಗಳು ಜನರನ್ನು ಆಕರ್ಷಿಸುತ್ತಿತು.

ಕಾರ್ಯಕ್ರಮವನ್ನು ಸಹಸ್ರಾರು ಜನರು ಕಣ್ತುoಬಿಕೊಳ್ಳುತ್ತಿರುವುದು ಕಾಣ ಬಂತು. ಶಾಸಕ ಭೀಮಣ್ಣ ನಾಯ್ಕ್ ,ಅಶ್ವಿನ್ ಭೀಮಣ್ಣ , ಕುಮಾರ ಬೋರ್ಕರ್ , ರಾಜೇಶ ದೇಶಭಾಗ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊoಡಿದ್ದರು.

About The Author