Political News: ನಿನ್ನೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಗೆ ಮುಂದಾಗಿದ್ದು, ಅವರ ಪ್ರತಿಭಟನೆ ತಡೆದ ಪೋಲೀಸರು, ಇನ್ನು 1 ವರ್ಷ ಪ್ರತಿಭಟನೆ ಮಾಡಬಾಾರದು ಎಂದು ಮುಚ್ಚಳಿಕೆ ಬರೆಸಿಕ“ಂಡಿದ್ದಾರೆ. ಅಲ್ಲದೇ 1 ಲಕ್ಷ ದಂಡ ವಿಧಿಸಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಧಾರವಾಡದಲ್ಲಿ ನಿನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರನ್ನು ಬಂಧಿಸಿ ಒಂದು ಲಕ್ಷ ಬಾಂಡ್ ಮತ್ತು ಒಂದು ವರ್ಷ ಹೋರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕೆಂದು ಪೊಲೀಸರು ಹೇಳಿದ್ದಾರಂತೆ.
ಮಾನ್ಯ ಗೃಹ ಮಂತ್ರಿಗಳಾದ ಡಾ.ಪರಮೇಶ್ವರ್ ಅವರೇ, ಪೊಲೀಸರಿಗೆ ಈ ರೀತಿ ಮಾಡಲು ಯಾರು ನಿರ್ದೇಶನ ನೀಡಿದ್ದು ? ಸಂವಿಧಾನ ಬದ್ಧವಾದ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟಕ್ಕೂ, ಅವರು ಕೇಳಿದ್ದು ನೌಕರಿಯೇ ಹೊರತು ಬೇರೇನೂ ಅಲ್ಲ. ಪರೀಕ್ಷಾರ್ಥಿಗಳ ಕಿಚ್ಚು ಸರ್ಕಾರಕ್ಕೆ ಇರುಸು ಮುರುಸಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಇವರ ನ್ಯಾಯಸಮ್ಮತವಾದ ಹೋರಾಟ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಯಾವುದೇ ಆದಾಯವಿಲ್ಲದ ಉದ್ಯೋಗಾಕಾಂಕ್ಷಿಗಳಿಗೆ 1 ಲಕ್ಷ ಬಾಂಡ್ ಕೊಡಿ ಮತ್ತು 1 ವರ್ಷ ಹೋರಾಟ ಮಾಡಬಾರದೆಂದು ಧಮ್ಕಿ ಹಾಕುತ್ತಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರದೆ ಯಾವುದೇ ಮುಚ್ಚಳಿಕೆ ನೀಡುವ ಅವಶ್ಯಕತೆ ಇಲ್ಲ. ಸರ್ಕಾರದ ಈ ಸಂವಿಧಾನ ವಿರೋಧಿ ನಡೆಯನ್ನು ಕಾನೂನಾತ್ಮಕವಾಗಿ ಎದುರಿಸೋಣ. ಉದ್ಯೋಗಾಕಾಂಕ್ಷಿಗಳ ಜೊತೆ ನಾನಿದ್ದೇನೆ ಎಂದು ಯತ್ನಾಳ್ ಭರವಸೆ ನೀಡಿದ್ದಾರೆ.




