Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಎಷ್ಟು ಗಂಟೆ ಕೆಲಸ ಮಾಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುಭಾಷ್ ಚಂದ್ರ ಅವರು, ಎಷ್ಟು ಗಂಟೆ ಕೆಲಸ ಅಂತಾ ಹೇಳೋಕ್ಕಾಗಲ್ಲಾ. ಪ್ರಧಾನಿ ಮೋದಿ ಅವರು ಈ ವಯಸ್ಸಿನಲ್ಲಿ ಗಂಟೆ ಕಾಣದೇ ಕೆಲಸ ಮಾಡುತ್ತಾರೆ. ಅವರ ಈ ರೀತಿಯ ನಿಯಮದಿಂದಲೇ, ಇಂದು ಎಲ್ಲರೂ ಭಾರತಕ್ಕೆ ಬೆಂಬಲಿಸುತ್ತಿದ್ದಾರೆ.
ಹಾರ್ಮೂಜ್ ಜಲಸಂಧಿ ಓಪನ್ ಮಾಡಿ ಎಂದು ಹಲವು ದೇಶಗಳು ಕೇಳಿದರೂ, ಯಾರ ಮಾತೂ ಕೇಳದ ಇರಾನ್, ಬರೀ ಭಾರತಕ್ಕೆ ಮಾತ್ರ ಹಾರ್ಮೂಜ್ ಜಲಸಂಧಿ ಓಪನ್ ಮಾಡಿ, ನಮ್ಮನ್ನು ಬೆಂಬಲಿಸುತ್ತಿದೆ. ಇದಕ್ಕೆಲ್ಲ ಮೋದಿ ಅವರ ಶ್ರಮ, ಚಾತುರ್ಯತೆ ಕಾರಣ. ಅದೇ ರೀತಿ ನಾವು ಸಮಯ ನೋಡಿ ಕೆಲಸ ಮಾಡಬಾರದು. ಬ್ಯಾಲೆನ್ಸ್ ಮಾಡುವುದನ್ನು ಕಲಿಯಬೇಕು. ಇಷ್ಟ ಪಟ್ಟು ಕೆಲಸ ಮಾಡಬೇಕು ಅಂತಾರೆ ಸುಭಾಷ್ ಚಂದ್ರ.
ಇನ್ನು ಯುವ ಪೀಳಿಗೆಯವರಿಗೆ ಐಡಿಯಾಗಳನ್ನು ಇದ್ದರೆ, ಅದನ್ನು ಹಾಳಾಗಲು ಬಿೠಡಬೇಡಿ. ಅದನ್ನು ಕಾರ್ಯ ರೂಪಕ್ಕೆ ತನ್ನಿ. ಬಂಡವಾಳ ಹೂಡಲು ಹಲವರಿದ್ದಾರೆ. ನೀವು ಹುಡುಕಬೇಕು. ತಾಳ್ಮೆಯಿಂದ ಕೆಲಸ ಮಾಡಬೇಕು. ನಮ್ಮ ಕೈಯಲ್ಲಿರುವ ಸೆಲ್ ಫೋನ್ ನಮ್ಮ ಸಮಯ ಹಾಳು ಮಾಡುತ್ತಿದೆ. ಅದನ್ನು ಅರಿತು ಯುವ ಪೀಳಿಗೆಯವರು, ಜೀವನ ಮಾಡಬೇಕಿದೆ ಎಂದು ಸುಭಾಷ್ ಚಂದ್ರ ಕಿವಿ ಮಾತು ಹೇಳಿದ್ದಾರೆ.




