ಪೂರ್ಣಬ್ರಹ್ಮ ಎಂದು ಕರೆಸಿಕೊಳ್ಳುವ ಅನ್ನ, ಮನುಷ್ಯನ ಜೀವನದ ಮಹತ್ವಪೂರ್ಣ ಭಾಗ. ಏನಿಲ್ಲದಿದ್ದರೂ ಬದುಕಬಹುದು, ಊಟ, ಬಟ್ಟೆ, ಪ್ರೀತಿ ಇಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ಈ ಮೂರಕ್ಕೂ ವಿಶೇಷ ಮಹತ್ವವಿದೆ. ಅದರಲ್ಲೂ ಹೊಟ್ಟೆಗೆ ಹಿಟ್ಟು ಬೀಳದಿದ್ದರೆ, ಮನುಷ್ಯ ಬದುಕಲು ಹೇಗೆ ಸಾಧ್ಯ..? ಅನ್ನಪೂರ್ಣೆಯ ಕೃಪೆ ಇದ್ದರೆ ಮಾತ್ರ ಮನುಷ್ಯ ಉದ್ಧಾರವಾಗಲು ಸಾಧ್ಯ. ಮನುಷ್ಯ ದುಡಿಯೋದೇ ತುತ್ತು ಅನ್ನಕ್ಕಾಗಿ ಅಲ್ವಾ.? ಆದ್ರೆ ನಾವು ಕೆಲವೊಮ್ಮೆ ಮಾಡುವ ತಪ್ಪುಗಳು, ನಮ್ಮನ್ನು ಉಪವಾಸಕ್ಕೆ ಕೆಡುವುತ್ತದೆ. ಯಾಕೆ ಹೀಗಾಗತ್ತೆ..? ಈ ಬಗ್ಗೆ ನಾವು ಮಾಡುವ ಎಡವಟ್ಟುಗಳೇನು ಅನ್ನೋದರ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.

ಜೇಬಿನಲ್ಲಿ ಸಾವಿರ ಸಾವಿರ ದುಡ್ಡಿದ್ದರೂ, ಕೆಲವೊಮ್ಮೆ ಕೆಲವರಿಗೆ ತಿನ್ನೋಕ್ಕೆ ಒಂದು ತುತ್ತು ಅನ್ನವೂ ಸಿಗೋದಿಲ್ಲಾ. ಆದ್ರೆ ಜೇಬಲ್ಲಿ ಒಂದು ರೂಪಾಯಿ ಇದ್ದವನಿಗೆ ಕೆಲವೊಮ್ಮೆ ಹೊಟ್ಟೆ ತುಂಬ ಊಟ ಸಿಗುತ್ತದೆ. ಯಾಕಂದ್ರೆ ಆತ ಅನ್ನಪೂರ್ಣೆಯ ಆರಾಧಕನಾಗಿರುತ್ತಾನೆ. ಸಿಕ್ಕ ಅನ್ನಕ್ಕೆ ಬೆಲೆ ನೀಡುತ್ತಾನೆ, ಅವಮಾನಿಸುವುದಿಲ್ಲ. ಆದ್ದರಿಂದ ಆತನಿಗೆ ಅನ್ನಪೂರ್ಣೆ ಒಲಿದಿರುತ್ತಾಳೆ.
ಹಾಗಾದ್ರೆ ಅನ್ನಪೂರ್ಣೆ ಒಲಿಯಬೇಕಂದ್ರೆ ಏನು ಮಾಡಬೇಕು..? ಊಟ ಮಾಡಿದ ಬಳಿಕ ಮಾಡಬಾರದ ಕೆಲ ತಪ್ಪುಗಳು ಯಾವ್ದು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಮೊದಲನೇಯ ತಪ್ಪಂದ್ರೆ, ಊಟ ಮಾಡುವಾಗ ಅದೇ ಎಂಜಿಲು ಕೈಯಿಂದ ಊಟ ಬಡಿಸಿಕೊಳ್ಳಬಾರದು. ಇದು ಅನ್ನಪೂರ್ಣೆಗೆ ಅವಮಾನ ಮಾಡಿದ ಹಾಗೆ ಆಗುತ್ತದೆ.
ಎರಡನೇಯದಾಗಿ ಊಟ ಮಾಡಿದ ತಟ್ಟೆಯಲ್ಲೇ ಕೈ ತೊಳೆಯಬಾರದು. ಇದರಿಂದ ಮನೆಗೆ ಒಳಿತಾಗುವುದಿಲ್ಲ. ಹಣಕಾಸಿನ ಸಮಸ್ಯೆ ಬರುತ್ತದೆ.
ಮೂರನೇಯದಾಗಿ ಊಟ ಮಾಡಿದ ನಂತರ ಕೈ ತೊಳೆದ ಬಳಿಕ, ಕೈ ಜಾಡಿಸಿಕೊಳ್ಳುವ ಅಭ್ಯಾಸ ಕೆಲವರಿಗಿರುತ್ತದೆ. ಆ ಅಭ್ಯಾಸವನ್ನ ಇಂದೇ ಬಿಡಿ. ಯಾಕಂದ್ರೆ ಹೀಗೆ ಮಾಡುವುದರಿಂದ ನಿಮಗೆ ಅನಾರೋಗ್ಯ ಸಮಸ್ಯೆ ಬಾಧಿಸುತ್ತದೆ. ತಿಂದ ಅನ್ನ ಮೈಗೆ ಹತ್ತುವುದಿಲ್ಲ. ಇಷ್ಟೇ ಅಲ್ಲದೇ, ಆಲಸ್ಯ ನಿಮ್ಮ ಮೈಗೂಡುತ್ತೆ. ಇದರಿಂದ ನೀವು ಯಶಸ್ಸು ಕಾಣಲಾಗುವುದಿಲ್ಲ.
ನಾಲ್ಕನೇಯದಾಗಿ ಅಡುಗೆ ರುಚಿಯಾಗಿರದಿದ್ದರೆ, ಮಾಡಿದವರಿಗೆ ಬೈಯ್ಯಬಾರದು. ಊಟಕ್ಕೆ ಕೂತಾಗ ಸಿಟ್ಟು ಮಾಡುವುದಾಗಲಿ, ಊಟದ ತಟ್ಟೆಗೆ ಒದೆಯುವುದಾಗಲಿ ಮಾಡಬಾರದು.
ಇನ್ನು ಐದನೇಯದಾಗಿ ಊಟ ಮಾಡಿದ ತಟ್ಟೆಯನ್ನ ತಕ್ಷಣ ತೊಳೆದಿಡಿ. ಅದನ್ನ ಒಣಗಿಸಿಬೇಡಿ. ಹೀಗೆ ಮಾಡುವುದರಿಂದ ಮನೆ ಒಡೆಯನ ಹೊಟ್ಟೆ ಒಣಗುತ್ತದೆ. ಆತ ಅನಾರೋಗ್ಯಕ್ಕೆ ಒಳಗಾಗುತ್ತಾನೆ.
ಈ ಐದು ತಪ್ಪುಗಳನ್ನ ಮಾಡದೇ, ನೀವು ಅನ್ನಪೂರ್ಣೆಯ ಆರಾಧನೆ ಮಾಡಿದ್ದಲ್ಲಿ, ಅನ್ನಪೂರ್ಣೆ ನಿಮಗೆ ಒಲಿಯುತ್ತಾಳೆ. ಮನೆಯಲ್ಲಿನ ದುಃಖ ದಾರಿದ್ರ್ಯ ಕಳೆದು, ನೀವು ಉತ್ತಮವಾಗಿ ಬದುಕುವಿರಿ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911




