SSLC ಬೋರ್ಡ್ ಎಡವಟ್ಟು, ಪರೀಕ್ಷೆಗೆ ಹಾಜರಾದರೂ ಹಾಜರಾಗಿಲ್ಲವೆಂದು ಅಂಧ ವಿದ್ಯಾರ್ಥಿನಿಗೆ ಫೇಲ್ ಫಲಿತಾಂಶ

Sirsi News: ಎಸ್.ಎಸ್.ಎಲ್ ಸಿ ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಎಲ್ಲಾ ಪರೀಕ್ಷೆಗೆ ಹಾಜುರಾಗಿದ್ದರೂ ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜುರಾಗಿಲ್ಲ ಎಂದು ಅಂಧ ವಿದ್ಯಾರ್ಥಿನಿಯನ್ನ ಫೇಲ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಇಂದಿರಾ ನಗರದ ಯುನಿಯನ್ ಉರ್ದು ಫ್ರೌಢಶಾಲೆಯಲ್ಲಿ ನಡೆದಿದೆ.

ಇಂದಿರಾ ನಗರದ ಯುನಿಯನ್ ಉರ್ದು ಫ್ರೌಢಶಾಲೆಯಲ್ಲಿ SSLC ಪರೀಕ್ಷೆ ಬರೆದಿರುವ ಲೀಸಾ ಖಾನಮ್ ಅಂಧ ವಿದ್ಯಾರ್ಥಿನಿಯಾದ್ದರಿಂದ ವಿಷಯ ವಿನಾಯ್ತಿ ಇದ್ದು ಅದರಂತೆ ಗಣಿತ ಮತ್ತು ವಿಜ್ಞಾನ ವಿಷಯದ ಬದಲು ಪೊಲಟಿಕಲ್ ಸೈನ್ಸ್ ಮತ್ತು ಎಕನಾಮಿಕ್ಸ್ ವಿಷಯದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು .ಇದರಂತೆ ಈಕೆ ಎಲ್ಲಾ ಪರೀಕ್ಷೆಗೆ ಹಾಜುರಾಗಿ ಬರೆದಿದ್ದರು.

ಆದರೆ ಸೋಷಿಯಲ್ ಸೈನ್ಸ್ ಪರೀಕ್ಷೆಗೆ ಹಾಜುರಾಗಿದ್ದರೂ ಆಪ್ಸೆಂಟ್ ಎಂದು ನಮೋದಿಸಲಾಗಿದೆ. ಇದರಿಂದ ಕನ್ನಡ -100, ಇಂಗ್ಲೀಷ್ -92, ಎಕನಾಮಿಕ್ಸ್ -98 ,ಪೊಲಟಿಕಲ್ ಸೈನ್ಸ್ -92 ,ಒಟ್ಟು -526 ಅಂಕ ಗಳಿಸಿ 84.16 % ಪಡೆದಿರುವ ಅಂಧ ವಿದ್ಯಾರ್ಥಿನಿ ಫೇಲ್ ಆಗಿದ್ದಾರೆ.ತಾನು ಎಲ್ಲಾ ಪರೀಕ್ಷೆ ಬರೆದರೂ ತನ್ನನ್ನು ಫೇಲ್ ಮಾಡಲಾಗಿದೆ.

ಪರೀಕ್ಷೆಗೆ ಹಾಜುರಾಗಿಲ್ಲ ಎಂದು ನಮೋದಿಸಲಾಗಿದೆ ,ಅಂಧತ್ವ ಇದ್ದರೂ ಕಷ್ಟಪಟ್ಟು ಕೇಳಿಸಿಕೊಂಡು ಪರೀಕ್ಷೆ ಪರೆದಿದ್ದೇನೆ ಆದರೇ ಹೀಗೆ ಮಾಡಲಾಗಿದೆ ಎಂದು ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾಳೆ.ಇನ್ನು ಶಿಕ್ಷಣ ಇಲಾಖೆಗೆ ಎಲ್ಲಾ ದಾಖಲೆ ನೀಡಲಾಗಿದೆ. ಪ್ರಾಧಿಕಾರ ಫೇಲ್ ಮಾಡಿದೆ ತಕ್ಷಣ ಆದ ಎಡವಟ್ಟನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

About The Author