Haveri News: ವರದ ನದಿಯಲ್ಲಿ ಚಿನ್ನ ಹುಡುಕುವ ಸಾಹಸಕ್ಕಿಳಿದ ಜನ..

Haveri News: ಹಾವೇರಿ: ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಂದೆ 2ಲಕ್ಷಕ್ಕೆ ಹೋಗಿ ತಲುಪುವ ಸಾಧ್ಯತೆಯೂ ಇದೆ. ಹಾಗಾಗಿ ಹಾವೇರಿಯಲ್ಲಿ ಜನ ಈ ಬಿರುಬಿಸಿಲಿನಲ್ಲೂ ಬಂಗಾರ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಅರೇ ಇದೇನಿದು ಕೋಲಾರದಲ್ಲಿ ಆದ್ರೆ ಚಿನ್ನದ ಗಣಿ ಇದೆ. ಹಾವೇರಿಯಲ್ಲಿ ಏನಿದೆ ಅಂತಾ ನೀವು ಕೇಳಿದ್ರೆ, ಹಾವೇರಿಯಲ್ಲೂ ಚಿನ್ನ ತೆಗೆಯಲಾಗುತ್ತದೆ. ಇಲ್ಲಿರುವ ವರದಾ ನದಿಯಲ್ಲಿ ಚಿನ್ನದ ಕಣಗಳು ಸಿಗುತ್ತದೆ. ಹಾಗಾಗಿಯೇ ಶಿವಮ“ಗ್ಗದಿಂದ ಹಾವೇರಿಗೆ ವಲಸೆ ಬಂದಿರುವ ಇರ್ಲರ್ ಸಮುದಾಯದವರು, ಬೆಂಕಿಯಂತೆ ಸುಡುವ ಬಿಸಿಲಿನಲ್ಲೂ ನದಿಗೆ ಹೋಗಿ, ಅಲ್ಲಿ ಬಂಗಾರದ ಬೇಟೆಯಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಹಾವೇರಿಯಲ್ಲಿ ಸಿಕ್ಕಾಪಟ್ಟೆ ಬಿಸಿಲಿರುವ ಕಾರಣ, ವರದಾ ನದಿ ಬತ್ತಿ ಹೋಗಿದೆ. ಇಲ್ಲಿನ ಕಪ್ಪು ಮಣ್ಣಿನಲ್ಲಿ ಬಂಗಾರದ ಕಣಗಳು ಸಿಗುತ್ತದೆ. ಹಾಗಾಗಿ ಜನ ಬಂಗಾರವನ್ನು ಹುಡುಕಲು ಬಂದಿದ್ದಾರೆ. ಇವರು ನದಿಯ ಮರಳನ್ನು ಕ್ಲೀನ್ ಮಾಡಿ, ಅದರಲ್ಲಿ ಬಂಗಾರದ ಕಣಗಳನ್ನು ಸಂಗ್ರಹಿಸುತ್ತಾರೆ. ಸದ್ಯ ಜಾಾಲಿ ಹಿಡಿದು ನೀರಿಗಿಳಿದಿರುವ ಜನರಿಗೆ 1 ಕಣ ಸಿಕ್ಕಿದ್ರೂ ಸಾಕು ಅನ್ನುವಂತಾಗಿದೆ.

About The Author