Hubli News: ಹೀಟ್ ಸ್ಟ್ರೋಕ್ ನಿಂದ ಬರೋರಿಗೆ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ: ಸಚಿವ ಗುಂಡೂರಾವ್

Hubli Political News: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲಾ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೇವೆ, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರು ಬದ್ಧರಾಗಿದ್ದೇವೆ. ಆದರೆ, ಸಚಿವ ಸಂಪುಟ ಪುನರ ರಚನೆಯಾಗಬೇಕು. ಬೇರೆಯವರಿಗೆ ಕೂಡಾ ಅವಕಾಶ ಸಿಗಬೇಕು ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು,ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಆಗಬೇಕು. ಅದರ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ತೀರ್ಮಾನ ಕೈಗೊಳ್ಳುತ್ತಾರೆ. ಪಕ್ಷ ಏನೇ ತೀರ್ಮಾನ ಕೈಗೊಂಡ್ರು ನಾವು ಒಪ್ಪಿಕೊಳ್ಳುತ್ತೇವೆ ದೊಡ್ಡತನ ಪ್ರತಿಯೊಬ್ಬರ ಬಳಿ ಇರಬೇಕೆಂದರು.

ಇನ್ನೂ ಕೋವಿಡ್ ಸಮಯದಲ್ಲಿ ಹಗರಣ ಬಗ್ಗೆ ಖುನ್ಹಾ ಆಯೋಗ ತನಿಖೆ ವಿಚಾರದ ತನಿಖೆಯಾಗುತ್ತಿದೆ. ಕೋವಿಡ್ ಸಮಯದಲ್ಲಿ ಸಾಕಷ್ಟು ದುರುಪಯೋಗವಾಗಿದೆ ಅದು ಕಣ್ಣಿಗೆ ಕೂಡಾ ಕಾಣುತ್ತಿದೆ. ಆದ್ರೆ ಸಾಕ್ಷಿ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತನಿಖೆ ನಡೆಯುತ್ತಿದೆ. 225 ವೈದ್ಯರ ನೇಮಕಕ್ಕೆ ಅನುಮೋದನೆ ಸಿಕ್ಕಿದೆ. ಕೂಡಲೇ ವೈದ್ಯರು ಮತ್ತು ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಜೆನರಿಕ್ ಔಷಧಿ ಮಳಿಗೆ ಮುಂದುವರಿಬಾರದು ಅನ್ನೋದು ನಮ್ಮ ಉದ್ದೇಶ,ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ಔಷಧಿಗಳು ಮಾತ್ರ ಇರಬೇಕು,ಆದ್ರೆ ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ಬೇಸಿಗೆ ಹಿನ್ನೆಲೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲಾ ಕಡೆ ಮಾರ್ಗಸೂಚಿ ನೀಡಲಾಗಿದೆ. ಹೀಟ್ ಸ್ಟ್ರೋಕ್ ನಿಂದ ಬರೋರಿಗೆ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ.ಎಲ್ಲಾ ಆಸ್ಪತ್ರೆಯಲ್ಲಿ ಬೆಡ್ ಗಳನ್ನು ಮೀಸಲಿಡಲಾಗಿದೆ. ಇಲ್ಲಿವರಗೆ ಅಹಿತಕರ ಘಟನೆ ನಡೆದಿಲ್ಲಾ ಎಂದರು..

ಸಂಗಮೇಶ್ ಸತ್ತೀಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ

About The Author