ಬುಧವಾರ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿರುವ ಪ್ರತಿಷ್ಠಿತ ಜನಪ್ರಿಯ ಪುಸ್ತಕ ಅಂಗಡಿ ‘ಬುಕ್ವರ್ಮ್’ಗೆ ನೀರು ನುಗ್ಗಿದೆ. ನೋಡ ನೋಡುತ್ತಲೇ ಅಂಗಡಿಯೊಳಗೆ ನೀರು ಆವರಿಸಿ ಸಾವಿರಾರು ಪುಸ್ತಕಗಳಿಗೆ ಹಾನಿಯುಂಟಾಗಿದೆ.
ಅಕಸ್ಮಾತ್ ಸುರಿದ ಮಳೆಯಿಂದ ಅಂಗಡಿಯೊಳಗೆ ನೀರು ತುಂಬಿ, ಶೆಲ್ಫ್ಗಳಲ್ಲಿ ಇಟ್ಟಿದ್ದ ಸುಮಾರು 4,000 ರಿಂದ 5,000 ಪುಸ್ತಕಗಳು ಹಾನಿಗೊಂಡಿವೆ. ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ ಅಂಗಡಿ ಕ್ಷಣಾರ್ಧದಲ್ಲಿ ನೀರಿನಿಂದ ಆವೃತಗೊಂಡಿದೆ.
ಅಂಗಡಿ ಮಾಲೀಕರ ಪ್ರಕಾರ, ಸುಮಾರು ₹14 ಲಕ್ಷ ಮೌಲ್ಯದ ಪುಸ್ತಕಗಳು ನಾಶವಾಗಿವೆ. ಪುಸ್ತಕಗಳನ್ನು ಉಳಿಸಲು ಹರಸಾಹಸ ಪಟ್ಟರೂ ಬಹುತೇಕ ಪುಸ್ತಕಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಈ ಘಟನೆ ಮಳೆಯಿಂದ ಉಂಟಾದ ನಗರ ಅನಾಹುತಗಳ ಮತ್ತೊಂದು ಉದಾಹರಣೆಯಾಗಿದ್ದು, ಪುಸ್ತಕ ಪ್ರಿಯರಿಗೆ ದೊಡ್ಡ ಆಘಾತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬುಧವಾರ ಸುರಿದ ಅಕಸ್ಮಾತ್ ಮಳೆಯಿಂದ ಬೆಂಗಳೂರು ನಗರ ಅಸ್ತವ್ಯಸ್ತಗೊಂಡಿದೆ. ಈ ಬಾರಿ ಮಳೆಗೆ 10 ಮಂದಿ ಬಲಿಯಾಗಿದ್ದು, ಮರಗಳು ಉರುಳಿ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಈ ಬಾರಿಯ ಮಳೆ ಪುಸ್ತಕ ಪುಸ್ತಕ ಪ್ರಿಯರಿಗೆ ದುಃಖ ತಂದಿದೆ.




