National Political News: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ತಾವು ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕ್ರಮದ ಪ್ರಕಾರ, ಬಂಗಾಳದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿದ್ದು, ಇನ್ನು ಮುಂದೆ ಬಿಜೆಪಿ ಆಡಳಿತ ನಡೆಸಲಿದೆ. ಹಾಗಾಗಿ ಮಾಜಿ ಸಿಎಂ ಆಗಿರುವ ಮಮತಾ ಬ್ಯಾನರ್ಜಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಆದರೆ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ್ದು, ಬಿಜೆಪಿಯವರು 100 ಸ್ಥಾನ ಗೆದ್ದಿಲ್ಲ. ಅದು 100 ಸ್ಥಾನ ಕದ್ದಿದೆ. ಹಾಗಾಗಿ ನಾವು ಚುನಾವಣೆಯಲ್ಲಿ ಸೋತಿಲ್ಲ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕಳೆದ 10 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ರಾಜ್ಯ ಭಾರ ಮಾಡಿದ ಮಮತಾ ಬ್ಯಾನರ್ಜಿ ಈ ಬಾರಿ ಬಿಜೆಪಿ ಅಭ್ಯರ್ಥಿ ಎದುರು ಸೋಲನ್ನಪ್ಪಿದ್ದಾರೆ. ಅದೆಷ್ೋ ಬಂಗಾಲಿಗರೇ, ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರೋದು ಮೋಸದಿಂದ ಅಂತ ಆರೋಪಿಸಿದ್ದಾರೆ. ಆದರೆ ಇದೀಗ ಬಿಜೆಪಿ ವಿರುದ್ಧ ಆರೋಪ ಮಾಡಿರುವ ಮಮತಾ, ಅವರು ಸ್ಥಾನಗಳನ್ನು ಗೆದ್ದಿಲ್ಲ. ಕದ್ದಿದ್ದಾರೆ. ಹಾಗಾಗಿ ನಾವು ಚುನಾವಣೆ ಸೋತಿಲ್ಲ. ಹಾಾಗಾಗಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.




