Spiritual: ಸಾವಾದ ಬಳಿಕದ 13 ದಿನಗಳು ಹೇಗಿರುತ್ತದೆ..? ಈ ವೇಳೆ ಏನೇನಾಗುತ್ತದೆ..?: ಭಾಗ -1

Spiritual: ಮನುಷ್ಯನ ಸಾವು ಇನ್ನೇನು ಕೆಲ ಕ್ಷಣಗಳಲ್ಲೇ ಆಗಲಿದೆ ಎನ್ನುವಾಗ, ಬೃಹದಾಕಾರದ ದೇಹದ, ಚೂಪಾದ ಉಗುರಿರುವ, ಕೆಂಪು ಕಣ್ಣಿನ ಯಮ ವಿಕಾರ ನಗುವಿನ ಜತೆ ಬಂದು, ಮನುಷ್ಯನ ಆತ್ಮ ಕರೆದ“ಯ್ಯುತ್ತಾನಂತೆ. ಆದರೆ ಮರಣದ 7 ಗಂಟೆವರೆಗೆ ಮನುಷ್ಯ ತಾನು ಸಾವನ್ನಪ್ಪಿದ್ದೇನೆ ಅನ್ನೋವುದನ್ನು ಒಪ್ಪಲು ನಿರಾಕರಿಸುತ್ತಾನೆ.

ಅವನು ತನ್ನ ಮನೆಯವರ ಜತೆ ಮಾತನಾಡಲು ಪ್ರಯತ್ನಿಸುತ್ತಾನೆ. ಸ್ಪರ್ಶಿಸಲು ಪ್ರತ್ನಿಸುತ್ತಾನೆ. ಅಳುತ್ತಾನೆ. ಹಾಗಾಗಿ ಮರಣದ ಬಳಿಕ ಬೇಗ ಬೇಗ ಅಂತ್ಯಸಂಸ್ಕಾರ ಮಾಡಕೂಡದು. ಸಂಬಂಧಿಕರೆಲ್ಲ ಬಂದು, ಮರಣವಾದ 7 ಗಂಟೆ ದಾಟಿದ ಬಳಿಕವೇ ಅಂತ್ಯಸಂಸ್ಕಾರ ಮಾಡಬೇಕು.

ಇನ್ನು ಪದ್ಧತಿ ಪ್ರಕಾರ ಅಂತ್ಯಸಂಸ್ಕಾರ ಮಾಡಿದರೆ ಮುಗಿಯಿತೇ..? ಇಲ್ಲ ಅನ್ನತ್ತೆ ಹಿಂದೂ ಪದ್ಧತಿ. 13 ದಿನಗಳ ಕಾರ್ಯ ಮನೆಯಲ್ಲಿರುವ ಪುರುಷ ಕಾರ್ಯ ಹಿಡಿಯಬೇಕು. 1 ಸಮಯ ಮಾತ್ರ ಅನ್ನ ಉಣ್ಣಬೇಕು. ಉಳಿದ ಸಮಯ ಫಲಾಹಾರ ಮಾಡಬೇಕು. ತನ್ನ ಮನೆಯ ಪದ್ಧತಿ ಪ್ರಕಾರ, ಆತ್ಮಕ್ಕೆ ಶಾಂತಿ ಸಿಗಲು ಏನೇನು ಮಾಡಬೇಕೋ, ಅದೆಲ್ಲ ಕ್ರಮ ಮಾಡಬೇಕು.

10ನೇ ದಿನ ಶುದ್ಧವಾಗಬೇಕು. 11ನೇ ದಿನ, 12ನೇ ದಿನ ಮನೆಯಲ್ಲಿ ಕಾರ್ಯ ಮಾಡಬೇಕು. 13ನೇ ದಿನ ತಿಥಿ ಮಾಡಿ, ಬ್ರಾಹ್ಮಣರು ಸೇರಿ, ಸಂಬಂಧಿಕರು, ಸ್ನೇಹಿತರು, ಬಡ ಬಗ್ಗರನ್ನು ಕರೆದು ಊಟ ಹಾಕಿ, ವಸ್ತ್ರ ದಾನ ಮಾಡಬೇಕು. ಇದೆಲ್ಲವೂ ಪದ್ಧತಿ ಪ್ರಕಾರವಾಗಿ ನಡೆಯಬೇಕು. 1ನೇ ದಿನದಿಂದ 13ನೇ ದಿನದವರೆಗೂ ಯಾವ ರೀತಿ ಆತ್ಮಕ್ಕೆ ಶಾಂತಿ ನೀಡುವ ಕಾರ್ಯವಾಗುತ್ತದೆ ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.

About The Author