Sarojni Diaries Part 3: ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ್ದ ಕುರ್ತಿಯ ಜೊತೆ ಬಂದಿತ್ತು ಗೆಜ್ಜೆ ಸದ್ದು ಮಾಡುವ ಪ್ರೇತ

Sarojni Diaries Part 3: ದೆಹಲಿಯ ಸರೋಜ್ನಿ ಮಾರ್ಕೇಟ್ ನಲ್ಲಿ ಬಟ್ಟೆ ಖರೀದಿಸಿದ ಬಳಿಕ ಇಬ್ಬರ ಜೀವನಜದಲ್ಲಿ ಏನೇನಾಯ್ತು ಅನ್ನೋದನ್ನು ನಾವು ಭಾಗ 1 ಮತ್ತು 2 ರಲ್ಲಿ ಹೇಳಿದ್ದೆವು. ಇದೀಗ ಭಾಗ ಮೂರರಲ್ಲಿ ಸಮೀಕ್ಷಾ ಎಂಬಾಕೆಯ ಹಾರರ್ ಅನುಭವದ ಬಗ್ಗೆ ಹೇಳಲಿದ್ದೇವೆ.

ಸಮೀಕ್ಷಾ ಎಂಬಾಕೆ ತನ್ನ ಅಪ್ಪ ಅಮ್ಮನೊಂದಿಗೆ ದೆಹಲಿಯ ಒಂದು ಪುಟ್ಟ ಮನೆಯಲ್ಲಿ ವಾಸವಿದ್ದಳು. ಸ್ವಲ್ಪ ಸಮಯದ ಹಿಂದೆ, ಆಕೆ ಸರೋಜ್ನಿ ಮಾರ್ಕೇಟ್‌ಗೆ ಹೋಗಿ ಅಲ್ಲಿ ಬಟ್ಟೆ ಖರೀದಿಸಿ ಬಂದಿದ್ದಳು.

ಅದರಲ್ಲಿ 1 ಕುರ್ತಿ ಆಕೆ ಧರಿಸಿದಾಗ, ಅದು ತುಂಬಾ ತಂಪಾಗಿರುವಂತೆ ಅವಳಿಗೆ ಅನುಭವವಾಗಿದೆ. ಅದನ್ನು ಯಾರೋ ಫ್ರೀಜರ್‌ನಲ್ಲಿ ಇಟ್ಟು ಕೊಟ್ಟಂತೆ ಅವಳಿಗೆ ಭಾಸವಾಗಿದೆ. ಆದರೆ ಇದೆಲ್ಲ ಭ್ರಮೆ ಎಂದು ಆಕೆ, ತಂದ ವಸ್ತ್ರವನ್ನು ಕಪಾಟಿನಲ್ಲಿರಿಸಿ, ಓದಲು ಕುಳಿತಿದ್ದಾಳೆ. ಬಳಿಕ ಬಾಯಾರಿಕೆಯಾಗಿ ನೀರು ತರಲು ಕಿಚನ್‌ಗೆ ಹೋದಾಗ, ಆಕೆಗೆ ತನ್ನ ಕೋಣೆಯಿಂದ ಗೆಜ್ಜೆ ಸದ್ದು ಕೇಳಿತಂತೆ.

ಆದರೆ ಆಕೆ ನಡೆದಾಗ ಮಾತ್ರ ಆ ಗೆಜ್ಜೆ ಸದ್ದು ಕೇಳುತ್ತಿತ್ತು. ಬಳಿಕ ಅದು ನಿಲ್ಲುತ್ತಿತ್ತು. ಆದರೆ ಸಮೀಕ್ಷಾ ಗೆಜ್ಜೆ ಧರಿಸಿರಲಿಲ್ಲ. ಆದರೂ ಆಕೆ ನಡೆಯುವಾಗ ಗೆಜ್ಜೆ ಸದ್ದು ಬರುತ್ತಿತ್ತು. ಆಕೆ ನಿಂತಾಗ ಸದ್ದು ಕೂಡ ನಿಲ್ಲುತ್ತಿತ್ತು. ಆದರೆ ಆಕೆ ಅದರ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. ಆದರೆ ಅಂದು ರಾತ್ರಿ ಆಕೆ ನಿದ್ದೆ ಮಾಡಿದಾಗ, ಆಕೆಯ ಹಿಂದೆ 1 ಆಕೃತಿ ಕುಳಿತು ಆಕೆಯ ಕೂದಲನ್ನು ಮುಟ್ಟಿದಂತೆ ಆಕೆಗೆ ಅನುಭವವಾಯಿತಂತೆ. ಆಕೆ ಲೈಟ್ ಹಾಕಿ ಕಂಡಾಗ, ಆಕೆಯ ಸುತ್ತಮುತ್ತ ಏನೂ ಇರಲಿಲ್ಲ. ಬಳಿಕ ಆಕೆ ಹೆದರುತ್ತಲೇ ನಿದ್ದೆ ಮಾಡಿದ್ದಳಂತೆ.

ಕಾಲೇಜಿಗೆ ಹೋಗಿ ಸ್ನೇಹಿತೆಯ ಬಳಿ ಈ ಮಾತು ಹೇಳಿದಾಗ, ನಿನ್ನ ಭ್ರಮೆ ಇರಬೇಕು ಎಂದು ಹೇಳಿದರಂತೆ. ಬಳಿಕ ಆ ಯುವತಿ 1 ವಾರ ಬಿಟ್ಟು ಮತ್ತೆ ಅದೇ ಬಟ್ಟೆ ಧರಿಸಿದಾಗ, ಅದೇ ರೀತಿಯ ಅನುಭವ ಆಯಿತಂತೆ. ಗೆಜ್ಜೆ ಸದ್ದು, ಮಲಗಿದಾಗ ಕೂದಲು ಮುಟ್ಟುವುದು, ತಲೆ ಸವರುವುದು ಹೀಗೆ ಸೇಮ್ ಅನುಭವ ಆಯಿತಂತೆ.

ಅಲ್ಲದೇ, ಕೆಟ್ಟ ಕೆಟ್ಟ ಕನಸು ಬೀಳೋದು, ರೂಮಿನಲ್ಲಿ ತನ್ನ ಜೊತೆ ಯಾರೋ ಇರುವ ಅನುಭವ ಹೀಗೆ ಹಲವು ರೀತಿಯ ಅನುಭವ ಆಗುತ್ತಿತ್ತಂತೆ. ಯಾರ ಬಳಿ ಹೇಳಿದರೂ ಅದು ನಿನ್ನ ಭ್ರಮೆ ಎನ್ನುವ ನೀರಸ ಉತ್ತರ ಬಿಟ್ಟರೆ ಮತ್ತೇನೂ ಸಿಗುತ್ತಿರಲಿಲ್ಲ.

ಆದರೆ 1 ದಿನ ಆಕೆ ತನ್ನ ಸ್ನೇಹಿತೆಯ ಮನೆಗೆ ಹೋದಾಗ, ಅಲ್ಲಿ ಆಕೆಯ ಸ್ನೇಹಿತೆಯ ಅಪ್ಪ 1 ಮಾತು ಹೇಳಿದ್ರಂತೆ. ಈಗಲೂ ಜನ ಹೊಟ್ಟೆ ಕಿಚ್ಚು ಇರುವವರ ಮೇಲೆ ಮಾಟ ಮಂತ್ರ ಮಾಡುತ್ತಿದ್ದಾರೆಂದರೆ ನಂಬಲೂ ಆಗೋದಿಲ್ಲಾ. ಜನರಿಗೆ ಯಾವಾಗ ಬುದ್ಧಿ ಬರುತ್ತದೆಯೋ ಏನೋ. ಮಕ್ಕಳೆ ನೀವು ಯಾರಾದ್ರೂ ಏನಾದ್ರೂ ಕೊಟ್ಟಾಗ ಅದನ್ನು ಕಣ್ಣು ಮುಚ್ಚಿ ತೆಗೆದುಕೊಳ್ಳಬೇಡಿ. ಅಲ್ಲದೇ, ಪ್ರಸಾದ ಎಂದು ಏನಾದ್ರೂ ಕೊಟ್ರೆ ಅದನ್ನು ತಿಂದು ಬಿಡಬೇಡಿ ಎಂದು ಎಚ್ಚರಿಕೆ ನೀಡಿದರಂತೆ.

ಆಗ ಸಮೀಕ್ಷಾಗೆ ತನಗೆ ಯಾರಾದ್ರೂ ಮಾಟ ಮಂತ್ರ ಮಾಡಿದ್ರಾ ಅನ್ನುವ ಯೋಚನೆ ಬಂತಂತೆ. ಆಕೆ ಈ ಆತಂಕಗಳೆಲ್ಲಾ ಯಾವಾಗಿನಿಂದ ಶುರುವಾಯ್ತು. ಯಾಕೆ ಶುರುವಾಯ್ತು ಅಂತಾ ಯೋಚನೆ ಮಾಡಲು ಶುರು ಮಾಡಿದಾಗ, ಆಕೆಗೆ ತಾನು ಸರೋಜ್ನಿ ಮಾರ್ಕೇಟ್‌ನಿಂದ ತಂದಿದ್ದ ಬಟ್ಟೆ ತಣ್ಣಗಿದ್ದ ನೆನಪಾಯ್ತು. ಆಗ ಆಕೆ ಆ ಬಟ್ಟೆಯಿಂದಲೇ ಈ ಸಮಸ್ಯೆ ಶುರುವಾಗಿರಬಹುದಾ ಎಂದು ಅಂದಾಜಿಸಿ, ಅದನ್ನು ಆಚೆ ಕಸಕ್ಕೆ ಎಸೆದು ಬಂದಳಂತೆ. ಅಂದಿನಿಂದ ಆಕೆ ಆರಾಮವಾಗಿದ್ದಾಳೆಂದು ಆಕೆ ಹೇಳಿದ್ದಾಳೆ.

About The Author