ಬಿಗ್ ಬಾಸ್ ಅಭಿಮಾನಿಗಳೇ ಎಚ್ಚರ! ಸುದೀಪ್ ವಿಡಿಯೋ ಹಿಂದಿರೋ ಸತ್ಯ ರಿವೀಲ್!

ಸೋಷಿಯಲ್ ಮೀಡಿಯಾದಲ್ಲಿ ಇದೀಗ ಬಿಗ್ ಬಾಸ್ ಕುರಿತ AI ಜನರೇಟೆಡ್ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಹಾಗೂ ಬಿಗ್ ಬಾಸ್ ಕನ್ನಡ ನಿರೂಪಕ ಕಿಚ್ಚ ಸುದೀಪ್ ಮಾತನಾಡುವಂತೆ ದೃಶ್ಯಗಳನ್ನು ರಚಿಸಲಾಗಿದೆ. ಆದರೆ ಇದು ಅಧಿಕೃತ ಕಾರ್ಯಕ್ರಮದ ವಿಡಿಯೋ ಅಲ್ಲ, ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ಕ್ಲಿಪ್ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಸುದೀಪ್ ಅವರ ಧ್ವನಿ ಹಾಗೂ ಹಾವಭಾವಗಳನ್ನು ಹೋಲುವ ರೀತಿಯಲ್ಲಿ ತೋರಿಸಿರುವುದರಿಂದ ಅನೇಕರು ನಿಜವಾದ ಕ್ಲಿಪ್ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೇಗವಾಗಿ ಹರಡುತ್ತಿದ್ದಂತೆ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ. ಕೆಲವರು ಇದನ್ನು ಮನರಂಜನೆಗಾಗಿ ಮಾಡಲಾದ ಕ್ರಿಯೇಟಿವ್ ಕಂಟೆಂಟ್ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಸೆಲೆಬ್ರಿಟಿಗಳ ಡೀಪ್‌ಫೇಕ್ ಬಳಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನದಿಂದ ಇಂತಹ ನಕಲಿ ವಿಡಿಯೋಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇವುಗಳ ನಿಜಾಸತ್ಯ ಪರಿಶೀಲಿಸದೇ ಹಂಚಿಕೊಳ್ಳಬಾರದು ಎಂಬ ಎಚ್ಚರಿಕೆ ಕೂಡ ತಜ್ಞರು ನೀಡುತ್ತಿದ್ದಾರೆ.

ಬಿಗ್ ಬಾಸ್ 13 ಕುರಿತ ಈ AI ವಿಡಿಯೋ ಈಗ ಟ್ರೆಂಡಿಂಗ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

About The Author