Delhi News: ಇದು ವಿಚಿತ್ರ ಲವ್ ಸ್ಟೋರಿ: ಅಪರಾಧಿಯನ್ನೇ ವಿವಾಹದ ಜೈಲು ಅಧಿಕಾರಿ

Delhi News: ನವದೆಹಲಿಯಲ್ಲಿ ವಿಚಿತ್ರ ಲವ್ ಸ್ಟೋರಿ ಸುದ್ದಿಯಾಗಿದೆ. ಕೊಲೆ ಮಾಡಿ ಜೈಲಿಗೆ ಬಂದವನನ್ನು ಅಲ್ಲಿನ ಅಧಿಕಾರಿ ಪ್ರೀತಿಸಿ ವಿವಾಹವಾಗಿದ್ದಾರೆ.

ಸತ್ನಾ ಸೆಂಟ್ರಲ್ ಜೈಲಿನಲ್ಲಿ ಈ ವಿಚಿತ್ರ ಲವ್ ಸ್ಟೋರಿ ನಡೆದಿದ್ದು, ಫಿರೋಜಾ ಖಾಟೂನ್ ಎಂಬಾಕೆ ಧರ್ಮೇಂದ್ರ ಸಿಂಗ್ ನನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾಳೆ.

ಕೃಷ್ಣ ದತ್ ದೀಕ್ಷಿತ್ ಎಂಬುವವರ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ 2007ರಲ್ಲಿ ಧರ್ಮೇಂದ್ರ ಸಿಂಗ್‌ಗೆ ಜೈಲು ಶಿಕ್ಷೆಯಾಗಿತ್ತು. 14 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಉತ್ತಮ ನಡುವಳಿಕೆಯ ಕಾರಣ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಧರ್ಮೇಂದ್ರ ಜೈಲಿನಲ್ಲಿದ್ದ ವೇಳೆ ಅಲ್ಲಿನ ಅಧಿಕಾರಿಯಾಗಿದ್ದ ಫಿರೋಜಾಗೆ ಧರ್ಮೇಂದ್ರ ಮೇಲೆ ಪ್ರೇಮಾಂಕುರವಾಗಿದೆ. ತನ್ನ ಮನೆಯವರ ಬಳಿ ತಾನು ಮದುವೆಯಾದರೆ ಆತನನ್ನೇ ಅಂತಾ ಆಕೆ ಪಟ್ಟು ಹಿಡಿದಿದ್ದಾಳೆ. ಆದರೆ ಮನೆಯವರು ಒಪ್ಪಲಿಲ್ಲ. ಆದರೆ ಧರ್ಮೇಂದ್ರ ಆಚೆ ಬಂದ ಬಳಿಕ, ಧರ್ಮೇಂದ್ರ ಸಂಪ್ರದಾಯದಂತೆ ಇಬ್ಬರೂ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

About The Author