ಮುನ್ನೆಚ್ಚರಿಕೆ ಇಲ್ಲದೆ ರಸ್ತೆ ಬಂದ್ | ಹೆದ್ದಾರಿಯಲ್ಲಿ ಸಾರ್ವಜನಿಕರ ಪರದಾಟ!

ಯಾವುದೇ ಮುನ್ನಚ್ಚರಿಕೆಯನ್ನು ನೀಡದೇ ರಸ್ತೆ ಬಂದ್‌ ಮಾಡಿ ಏಕಾಏಕಿ ಮಹಾನಗರ ಪಾಲಿಕೆಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಕಿತ್ತುಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಇಲ್ಲೇನು ಹೇಳೊರಿಲ್ವಾ ಕೇಳೊರಿಲ್ವಾ ಈಗಾಗಲೇ ಫ್ಲೈಓವರ್ ಕಾಮಗಾರಿಯಿಂದ ಹುಬ್ಬಳ್ಳಿ ಜನತೆ ಕಂಗಲಾಗಿ ಹೋಗಿದ್ದಾರೆ, ಇಂತಹ ಸಂಧರ್ಭದಲ್ಲಿ ಹುಬ್ಬಳ್ಳಿ ಪ್ರತಿಷ್ಠಿತ ದೇಸಾಯಿ ವೃತ್ತದ ಸೇತುವೆ ಸಂಚಾರ ಬಂದ್ ಮಾಡಿರುವುದರಿಂದ ಹುಬ್ಬಳ್ಳಿ ನಗರದ ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥವಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ನೀರಿನ ಪೈಪ್ ಸಲುವಾಗಿ ರಸ್ತೆಯನ್ನು ಅಗೆಯುತ್ತಿರುವ ಎಲ್ &ಟಿ ಸಿಬ್ಬಂದಿ, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದು, ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಿರುವ ಆಂಬ್ಯುಲೇನ್ಸ್ ಗಳಿಗೂ ಸಂಕಷ್ಟ ಎದುರಾಗಿದೆ ಹಾಗಾಗಿ ಆದಷ್ಟು ಬೇಗ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

About The Author