Bidar: ಲಾಂಗು-ಮಚ್ಚು ಹಿಡಿದು ದರೋಡೆಗಿಳಿದ ಕಳ್ಳರು: ಭಾಲ್ಕಿ ನಗರದಲ್ಲಿ ಆತಂಕದ ವಾತಾವರಣ

Bidar News: ಬೀದರ್: ಬೀದರ್‌ನ ಭಾಲ್ಕಿ ನಗರ ನಿವಾಸಿಗಳು, ಇದೀಗ ಕಳ್ಳತನದ ಆತಂಕದಲ್ಲೇ ದಿನಗಳೆಯುತ್ತಿದ್ದಾರೆ. ಮನೆ ಬಿಟ್ಟು ಹೋಗಲು ಹೆದರಿಕೆಯಾಗಿದ್ದು, ಮನೆಯಲ್ಲೇ ಇದ್ದರೂ ಯಾವಾಗ ಕಳ್ಳರು ಬಂದು ಅಟ್ಯಾಕ್ ಮಾಡಿ ಬಿಡ್ತಾರೋ ಅನ್ನೋ ಹೆದರಿಕೆಯಲ್ಲೇ ಜನ ದಿನ ದೂಡುವಂತಾಗಿದೆ.

ಭಾಲ್ಕಿ ನಗರದ ಲೆಕ್ಚರ್ ಕಲೋನಿಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಯಾರಿಗೂ ಅಂಜದೇ, ಲಾಂಗು-ಮಚ್ಚು ಹಿಡಿದು ಕಳ್ಳತನಕ್ಕೆ ಬರುತ್ತಿದ್ದಾರೆ. ರಾತ್ರಿ ಸುಮಾರು 1 ಗಂಟೆಗೆ ಬಂದು ಮನೆಗೆ ನುಗ್ಗುವ ಕಳ್ಳರು, ಮನೆಯಲ್ಲಿರುವವರಿಗೆ ಲಾಂಗು ಮಚ್ಚು ತೋರಿಸಿ, ಹೆದರಿಸಿ, ಬೆದರಿಸಿ, 3ರಿಂದ 4 ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

ಮನೆಯಲ್ಲಿದ್ದ ಸುಮಾರು 7 ತೊಲೆ ಬಂಗಾರ, 40 ಗ್ರಾಮ ಬೆಳ್ಳಿ 1 ಲಕ್ಷ ಹಣ ಕದ್ದಿದ್ದಾರೆ. ಸದ್ಯ ಕಳ್ಳತನವಾದ ಮನೆಯವರು ಭಾಲ್ಕಿ ನಗರ ಪೋಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಿಸಿದ್ದು, ಬೇಗ ಕಳ್ಳರನ್ನು ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

About The Author