Tumakuru News: ತುಮಕೂರು: ನೊಣವಿನಕೆರೆ ಮಠದಲ್ಲಿ ತಿಪಟೂರು ಶಾಸಕ ಕೆ.ಷಡಕ್ಷರಿ ಮಾಧ್ಯಮದ ಜತೆ ಮಾತನಾಡಿದ್ದು, ನಾನು 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ. ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಯಾರಿಗೂ ನಾನು ವಿರೋಧ ನೂ ಮಾಡಿಲ್ಲ. ವಿರೇಂದ್ರ ಪಾಟೀಲ ಕಾಲದಿಂದ ಪಕ್ಷದಲ್ಲಿ ದುಡಿತಾ ಬಂದಿದ್ದೇನೆ. ಬಹುಶಃ ಸಿದ್ದರಾಮಯ್ಯ ರನ್ನು ದೇವೇಗೌಡರು ಹೊರ ಹಾಕಿದಾಗ, ಸಿದ್ದರಾಮಯ್ಯ ರನ್ನು ಪಾರ್ಟಿಗೆ ಸೇರಿಸಿಕೊಳ್ಳು ಎಸ್ ಎಂ ಕೃಷ್ಣ ಅವ್ರು ಹೇಳಿದ್ದರು ಎಂದು ಹೇಳುವ ಮೂಲಕ, ತಾನು ಹಿರಿಯನಾಗಿದ್ದು ಸಚಿವ ಸ್ಥಾನ ಬೇಕು ಅನ್ನೋದನ್ನು ಷಡಕ್ಷರಿ ಪರೋಕ್ಷವಾಗಿ ಹೇಳಿದ್ದಾರೆ.
ಸಿದ್ದರಾಮಯ್ಯರು 8 ವರ್ಷಗಳ ಕಾಲ ಎಲ್ಲರನ್ನೂ ಜೊತೆ ಇಟ್ಟುಕೊಂಡು ಆಡಳಿತ ಮಾಡಿದ್ದಾರೆ. ಅವರ ಅವಶ್ಯಕತೆ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಇದೆ. ಡಿಕೆಶಿ ಆಸೆ ಇವತ್ತು ಈಡೇರುತ್ತಿದೆ. ಡಿಕೆಶಿ ಅವರು ಸ್ವಭಾವ ಮೃದು. ಮಾತು ಮಾತ್ರ ಸ್ವಲ್ಪ ಒರಟು. ನಾಳೆ ಅಥವಾ ನಾಡಿದ್ದು ಸಿಎಲ್ ಪಿ ಸಭೆ ನಡೆಯಬಹುದು. ಅಜ್ಯಯ್ಯನವರ ಆಶೀರ್ವಾದ ಡಿಕೆಶಿಗೆ ಸದಾ ಇದೆ. ಎಂಥ ಕಷ್ಟದಲ್ಲೂ ದೇವರು ಡಿಕೆಶಿಗೆ ಕೈ ಬಿಡಲ್ಲ.
ನಾನು ಸಚಿವ ಆಗಬೇಕು ಎನ್ನುವ ಹಂಬಲ ಇದೆ. ಈ ಬಾರಿ ನಾನು ಸಚಿವನಾಗುತ್ತೇನೆ ಎಂಬ ವಿಶ್ವಾಸ ಇದೆ.
ನಾನು ಹಳೇ ಮೈಸೂರು ಭಾಗದಲ್ಲಿ ಏಕೈಕ ಲಿಂಗಾಯತ ಶಾಸಕ. ಹಾಗಾಗಿ ಗುರುತಿಸಿ ಕೊಡಬಹುದು ಅನ್ನೋದು ನನ್ನ ಭಾವನೆ. ನನಗೆ ಸಹಕಾರಿ ಖಾತೆ ಕೊಡಲು ಸಿದ್ದರಾಮಯ್ಯನವರು ಮುಂದಾಗಿದ್ದರು. ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು. ಇಂಥಹ ಪರಿಸ್ಥಿತಿಯಲ್ಲಿ ಅವರು ರಾಷ್ಟ್ರ ರಾಜಕಾರಣಕ್ಕೆ ಅವಶ್ಯಕತೆ ಇದೆ ಎಂದು ಷಡಕ್ಷರಿ ಹೇಳಿದ್ದಾರೆ.




