Spiritual: 2 ವರ್ಷಗಳ ಹಿಂದೆ ನಿಮ್ಮ ಕರ್ನಾಟಕ ಟಿವಿ ಚಾನೆಲ್‌ನಲ್ಲಿ ಖ್ಯಾತ ಜ್ಯೋತಿಷಿಗಳಾದ ನಾರಾಯಣ ರೆಡ್ಡಿ ಗುರೂಜಿಯವರು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಇದೀಗ ನಿಜವಾಗಿದೆ.
ಡಿ.ಕೆ.ಶಿವಕುಮಾರ್ ಸಿಎಂ ಆಗುವ ಬಗ್ಗೆ ನಾರಾಯಣ ರೆಡ್ಡಿ ಗುರೂಜಿ ಅಂದೇ ಭವಿಷ್ಯ ನುಡಿದಿದ್ದರು. ಡಿಕೆಶಿ ಸಿಎಂ ಆಗೇ ಆಗುತ್ತಾರೆ. ಅವರಿಗೆ ಸಿಎಂ ಆಗುವ ಯೋಗ ಇದೆ. ಆದರೆ ಅದಕ್ಕಾಗಿ ಅವರು ತುಂಬ ಪ್ರಯತ್ನಿಸಬೇಕು. ದೇವರ ಪೂಜೆ, ಹೋಮ ಹವನಗಳಲ್ಲಿ ಭಾಗಿಯಾಗಬೇಕು. ಹಲವು ಅಡೆತಡೆಗಳು ಸಂಭವಿಸುತ್ತದೆ. ಅದನ್ನು ದಾಟಿ ಬಂದಾಗ ಮಾತ್ರ ಡಿಕೆಶಿಯವರು ಸಿಎಂ ಆಗಲು ಸಾಧ್ಯ ಅಂತಾ ನಾರಾಯಣ ರೆಡ್ಡಿ ಗುರೂಜಿ ಅಂದೇ ಭವಿಷ್ಯ ನುಡಿದಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಾಗ, ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯ ತೀವ್ರ ಪೈಪೋಟಿ ಇತ್ತು. ಎಷ್ಟೇ ಹೆಣಗಾಡಿದರೂ, ಸಿಎಂ ಸ್ಥಾನ ಮಾತ್ರ ಸಿದ್ದರಾಮಯ್ಯ ಅವರಿಗೇ ಸಿಕ್ಕಿತ್ತು. ಆಗಲೇ ಡಿಕೆಶಿ ಅರ್ಧ ಆಡಳಿತ ಸಿದ್ದರಾಮಯ್ಯನವರಿಗೆ ಇನ್ನರ್ಧ ಆಡಳಿತ ನನಗೆ ಎಂದು ಷರತ್ತು ಹಾಕಿದ್ದರು.
ಆದರೆ 2ವರೆ ವರ್ಷ ಆಡಳಿತ ಮಾಡಿದ ಬಳಿಕವೂ ಸಿದ್ಧರಾಮಯ್ಯ ಸಿಎಂ ಕುರ್ಚಿ ಬಿಡಲು ತಯಾರಿರಲಿಲ್ಲ. ಏಕೆಂದರೆ, ಇನ್ನು 1 ಬಾರಿ ಸಿದ್ದು ಬಜೆಟ್ ಮಂಡಿಸಿದರೆ, ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿಎಂ ಎಂದೆನ್ನಿಸಿಕ“ಳ್ಳುತ್ತಿದ್ದರು. ದಾಖಲೆ ಬಜೆಟ್ ಮಂಡಿಸಿದ ಖ್ಯಾತಿ ಅವರದಾಗುತ್ತದೆ ಎಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.
ಇದೀಗ ಬಜೆಟ್ ಮಂಡಿಸಿ, ದಾಖಲೆ ಮುರಿದ ಬಳಿಕ, ನೀಡಿದ ಮಾತಿನಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಮುಂದಿನ ಸಿಎಂ ಯಾರೆಂದೂ ಎಲ್ಲಿಯೂ ಘೋಷಣೆಯಾಗದಿದ್ದರೂ, ಡಿಕೆಶಿಯವರೇ ಮುಂದಿನ ಸಿಎಂ ಅಂತಾ ಅಂದಾಜಿಸಲಾಗಿದೆ.
ನಾರಾಯಣ ಗುರೂಜಿ ಹೇಳಿರುವ ಪ್ರಕಾರ, ಡಿ.ಕೆ.ಶಿಯವರಿಗೆ ಧರ್ಮ ಕರ್ಮ ಸಂಯೋಗವಿದೆ. ಹೀಗಾಗಿ ಅವರು ಧರ್ಮದಲ್ಲಿ ನಡೆಯಬೇಕು. ಕರ್ಮದಲ್ಲಿ ಶ್ರದ್ಧೆ ಇರಬೇಕು. ಇವೆರಡೂ ಕೆಲಸ ಸರಿಯಾಗಿ ಮಾಡಿದ್ದಲ್ಲಿ, ಅವರು ಗದ್ದುಗೇರುವುದು ಖಂಡಿತ ಎಂದಿದ್ದರು. ಅದೇ ರೀತಿ ಇದೀಗ ಡಿಕೆಶಿ ಸಿಎಂ ಆಗುವ ಸಮಯ ಬಂದೇ ಬಿಟ್ಟಿದೆ.




