
Health Tips: ಶುದ್ಧವಾದ ನೀರು ಕುಡಿಯಬೇಕು ಅಂತಾನೇ ನಾವು ವಾಟರ್ ಪ್ಯೂರಿಫಾಯರ್ನ್ನ ತಂದಿರ್ತೀವಿ. ಆದರೆ ಅದೇ ನೀರು ಕುಡಿದು, ಆಸ್ಪತ್ರೆ ಸೇರುವ ತನಕ ನಮ್ಮ ಆರೋಗ್ಯ ಹಾಳಾಗಬಹುದು ಅಂದ್ರೆ ನೀವು ನಂಬ್ತೀರಾ..? ಖಂಡಿತ ನಂಬಲೇಬೇಕು. ಹಾಗಾದ್ರೆ ವಾಟರ್ ಪ್ಯೂರಿಫಾಯರ್ ಬಳಸಿದ್ರೂ ಹೇಗೆ ಆರೋಗ್ಯ ಹಾಳಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮನೆಗೆ ವಾಟರ್ ಪ್ಯೂರಿಫಾಯರ್ ತಂದು ಫಿಟ್ ಮಾಡಿದ್ರೆ ಸಾಕಾಗುವುದಿಲ್ಲ. ಬದಲಾಗಿ ಪ್ರತೀ 3 ತಿಂಗಳು ಅಥವಾ 6 ತಿಂಗಳು, ಆ ಕಂಪನಿಯವರು ಹೇಗೆ ಸರ್ವಿಸ್ ನೀಡುತ್ತಾರೋ, ಆ ಆಧಾರದ ಮೇಲೆ ಆ ಯಂತ್ರದಲ್ಲಿ ಬಳಸುವ ಸ್ಪಾಂಜ್ ಚೇಂಜ್ ಮಾಡಿಸಬೇಕಾಗುತ್ತದೆ.
ನೀವು ಸರ್ವಿಸ್ ಮಾಡಿಸುವುದನ್ನು, ಸ್ಪಾಂಜ್ ಚೇಂಜ್ ಮಾಡಿಸುವುದನ್ನು ಮರೆತರೆ, ನೀರು ಕೂಡ ಅನಾರೋಗ್ಯವಾಗುತ್ತದೆ. ಹಾಗಾಗಿ ವಾಟರ್ ಪ್ಯೂರಿಫಾಯರ್ ಹಾಕಿದಾಗಲೂ, ಸರಿಯಾಗಿ ಕ್ಲೀನ್ ಮಾಡದಿದ್ದಲ್ಲಿ, ಅದರಿಂದ ಆರೋಗ್ಯ ಉತ್ತಮವಾಗುವ ಬದಲು, ಹಾಗಾಳುವ ಸಾಧ್ಯತೆಯೂ ಇರುತ್ತದೆ.



