Sandalwood: ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಾದ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಅವರಿಗೆ 1 ವರ್ಷದ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿಗಾಗಿ ದಂಪತಿ ಉಡುಪಿ ಕೃಷ್ಣನಲ್ಲಿ ಹರಕೆ ಹೊತ್ತಿದ್ದು, ಇಂದು ಆ ಹರಕೆ ಪೂರ್ಣಗೊಳಿಸಿದ್ದಾರೆ.
ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಿದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಗನ ಜೊತೆ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣನ ದರ್ಶನ ಮಾಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ನೆಲದ ಮೇಲೆ ಅನ್ನ ಪ್ರಸಾದ ಸೇವಿಸಿದ್ದಾರೆ. ಈ ಹರಕೆಯನ್ನು ನೆಲಭೋಜನ ಎಂದು ಕರೆಯಲಾಗುತ್ತದೆ.
ಬಳಿಕ ಶಿರೂರು ಶ್ರೀಗಳಾದ ವೇದವರ್ಧನ ಯತಿಗಳ ಆಶೀರ್ವಾದ ಪಡೆದಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ದಂಪತಿ ಒಂದೂವರೆ ವರ್ಷಗಳ ಹಿಂದೆ ಬಂದು ಹರಕೆ ಕಟ್ಟಿಕೊಂಡಿದ್ದು, ಇದೀಗ ಮಗ ಜನಿಸಿ 1 ವರ್ಷವಾಗಿದೆ. ತುಂಬಾ ಸಮಯದ ಬಳಿಕ ನಾವು ಕೃಷ್ಣ ಮಠಕ್ಕೆ ಬಂದಿದ್ದೇವೆ. ನೆಲಭೋಜನ ಮಾಡಿ ಹರಕೆ ಸಲ್ಲಿಸಿದ್ದೇವೆ ಎಂದಿದ್ದಾರೆ.




