ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ ಚಿನ್ನ ಹಾಗೂ ಬೆಳ್ಳಿ ದರ ಕುಸಿದಿದೆ. ಹಾಗಾದರೆ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು? ಎಷ್ಟು ರೂಪಾಯಿ ಇಳಿಕೆಯಾಗಿದೆ? ಈ ವರದಿ ನೋಡಿ. ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಂಕಿ-ಅಂಶಗಳ ಪ್ರಕಾರ, 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹಿಂದಿನ ವಾರದ ಹೋಲಿಕೆಯಲ್ಲಿ ಗಣನೀಯವಾಗಿ ಕುಸಿದಿದೆ.
ಕಳೆದ ವಾರ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1 ಲಕ್ಷ 58 ಸಾವಿರ 720 ರೂಪಾಯಿ ಇದ್ದರೆ, ಇದೀಗ ಅದು ಸುಮಾರು 1 ಲಕ್ಷ 56 ಸಾವಿರ ರೂಪಾಯಿಗಳ ಮಟ್ಟಕ್ಕೆ ಇಳಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಸುಮಾರು ಸಾವಿರ ರೂಪಾಯಿ ವರೆಗೆ ದರ ಕುಸಿದಿದೆ.
ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ 2 ಸಾವಿರ 650 ರೂಪಾಯಿ ಕಡಿಮೆಯಾಗಿ 2 ಲಕ್ಷ 63 ಸಾವಿರ 350 ರೂಪಾಯಿಗೆ ತಲುಪಿದೆ. ಕಳೆದ ವಾರ ಪ್ರತಿ ಕೆಜಿ ಬೆಳ್ಳಿ 2 ಲಕ್ಷ 66 ಸಾವಿರ ರೂಪಾಯಿ ಮಟ್ಟದಲ್ಲಿತ್ತು. ವಾರದ ಅವಧಿಯಲ್ಲಿ ಬೆಳ್ಳಿ ಬೆಲೆಯಲ್ಲಿ ಏರಿಳಿತಗಳು ಕಂಡುಬಂದಿದೆ.
24 ಕ್ಯಾರಟ್ ಚಿನ್ನದ ದರ ನೋಡೊದಾದ್ರೆ- 1 ಗ್ರಾಂ – ₹15,704, 8 ಗ್ರಾಂ – ₹1,25,632, 10 ಗ್ರಾಂ – ₹1,57,040, 100 ಗ್ರಾಂ – ₹15,70,400. 22 ಕ್ಯಾರಟ್ ಚಿನ್ನದ ದರ ನೋಡೊದಾದ್ರೆ – 1 ಗ್ರಾಂ – ₹14,395, 8 ಗ್ರಾಂ – ₹1,15,160, 10 ಗ್ರಾಂ – ₹1,43,950, 100 ಗ್ರಾಂ – ₹14,39,500. ಇಂದು 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 5 ಸಾವಿರ 500 ರೂಪಾಯಿ ಇಳಿಕೆಯಾಗಿದ್ದರೆ, 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 6 ಸಾವಿರ ರೂಪಾಯಿ ಕಡಿತ ದಾಖಲಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲೂ 10 ಗ್ರಾಂ ಚಿನ್ನದ ಬೆಲೆ 600 ರೂಪಾಯಿ ಇಳಿಕೆಯಾಗಿ 1 ಲಕ್ಷ 43 ಸಾವಿರ 950 ರೂಪಾಯಿಗೆ ತಲುಪಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳೂ ಚಿನ್ನ ಮತ್ತು ಬೆಳ್ಳಿ ದರದ ಮೇಲೆ ಪರಿಣಾಮ ಬೀರಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್ಗೆ 4,600 ಡಾಲರ್ ಹಾಗೂ ಬೆಳ್ಳಿಯ ಬೆಲೆ ಔನ್ಸ್ಗೆ 76 ಡಾಲರ್ ಮಟ್ಟಕ್ಕೆ ಇಳಿದಿದೆ.
ಜಾಗತಿಕ ಆರ್ಥಿಕ ಅನಿಶ್ಚಿತತೆ, ಹಣದುಬ್ಬರ ಹಾಗೂ ಕಚ್ಚಾತೈಲ ಮಾರುಕಟ್ಟೆಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ದರಗಳ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ಕಳೆದ ಕೆಲ ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಈಗ ಇಳಿಕೆ ಕಂಡುಬಂದಿರುವುದು ಖರೀದಿದಾರರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದರ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ.



