Recipe: ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿ, 1 ಕಪ್ ಹೆಸರು ಕಾಳು, ಹಸಿಮೆಣಸು, ಶುಂಟಿ, ಪಾಲಕ್, ಕೊತ್ತೊಂಬರಿ ಸೊಪ್ಪು, ಉಪ್ಪು, ಎಣ್ಣೆ.
ಮಾಡುವ ವಿಧಾನ: ಅಕ್ಕಿ ಮತ್ತು ಹೆಸರು ಕಾಳನ್ನು ಚೆನ್ನಾಗಿ ವಾಶ್ ಮಾಡಿ, 6ರಿಂದ 7 ಗಂಟೆ ನೆನೆಸಿಡಿ. ಬಳಿಕ ಹಸಿಮೆಣಸು, ಶುಂಟಿ, ಪಾಲಕ್, ಕೊತ್ತೊಂಬರಿ ಸೊಪ್ಪು, ಉಪ್ಪು ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿ. ದೋಸೆ ಹಿಟ್ಟು ರೆಡಿ ಮಾಡಿ. ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ ದೋಸೆ ಮಾಡಿ. ಇದಕ್ಕೆ ಕಾಯಿ ಚಟ್ನಿ ಉತ್ತಮ ಕಾಂಬಿನೇಶನ್.
ಆದ್ರೆ ಪ್ರತೀ ಸಲ ಬರೀ ಕಾಯಿ, ಹಸಿಮೆಣಸು, ಹುರಿಗಡಲೆ, ಉಪ್ಪು ಸೇರಿಸಿ ಚಟ್ನಿ ಮಾಡುವ ಬದಲು, ಅದಕ್ಕೆ ಸ್ವಲ್ಪ ಈರುಳ್ಳಿ ಸೇರಿಸಿದರೆ, ರುಚಿಯಾಗಿರುತ್ತದೆ. ಮಕ್ಕಳೂ ಕೂಡ ಇಷ್ಟಪಟ್ಟು ತಿಂತಾರೆ.




