Hubli: ನೈಋತ್ಯ ರೈಲ್ವೆ ಸರಕು ಸಾಗಣೆ ಮತ್ತು ಆದಾಯದಲ್ಲಿ ಗಮನಾರ್ಹ ದಾಖಲೆ..

Hubli News: ನೈಋತ್ಯ ರೈಲ್ವೆ ಮೇ 2026ರಲ್ಲಿ ಸರಕು ಸಾಗಣೆ ಹಾಗೂ ಪ್ರಯಾಣಿಕರ ಆದಾಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. 4.40 ಮಿಲಿಯನ್ ಟನ್ ಸರಕು ಸಾಗಣೆ ಮೂಲಕ ಮೇ ತಿಂಗಳಲ್ಲಿನ ಇದುವರೆಗಿನ ಅತಿ ಹೆಚ್ಚು ದಾಖಲೆ ನಿರ್ಮಿಸಿರುವ ವಲಯ, ಒಟ್ಟಾರೆ 770.71 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಮೇ ತಿಂಗಳಲ್ಲಿ ನೈಋತ್ಯ ರೈಲ್ವೆ 425 ಕೋಟಿ ರೂಪಾಯಿ ಸರಕು ಸಾಗಣೆ ಆದಾಯ ಹಾಗೂ 302 ಕೋಟಿ ರೂಪಾಯಿ ಪ್ರಯಾಣಿಕರ ಆದಾಯ ದಾಖಲಿಸಿದೆ. ಇದೇ ಅವಧಿಯಲ್ಲಿ 16.4 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದ್ದು, ಕಳೆದ ವರ್ಷಕ್ಕಿಂತ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬಂದಿದೆ.

ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು ಹಾಗೂ ಕಂಟೇನರ್ ಸಾಗಣೆಯಲ್ಲೂ ಗಣನೀಯ ಬೆಳವಣಿಗೆ ದಾಖಲಾಗಿದ್ದು, ವಲಯದ ಒಟ್ಟಾರೆ ಆದಾಯ 770.71 ಕೋಟಿ ರೂಪಾಯಿಗೆ ತಲುಪಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

About The Author