Political News: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ

Political News: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವೆ ಕ್ಷಣಗಳಲ್ಲಿ ನಡೆಯಲಿರು ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಚಿವ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಲು ಬನ್ನಿ ಎಂದು ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಅವರು ಕರೆ ಮಾಡಿದ್ದಕ್ಕಾಗಿ, ಖಾದರ್ ಈ ರಾಜೀನಾಮೆ ನಿರ್ಧಾರ ಮಾಡಿದ್ದಾರೆನ್ನಲಾಗಿದೆ.

ಖಾದರ್ ಯಾವ ಸಚಿವ ಆಕಾಂಕ್ಷಿಯೂ ಆಗಿರಲಿಲ್ಲ. ಆದರೆ ಖಾತೆ ನೀಡಿದರೆ, ಅದನ್ನು ಉತ್ತಮವಾಗಿ ನಿಭಾಯಿಸುತ್ತೇನೆ ಎಂದಿದ್ದರು. ಅದರಂತ ಯಾವುದೇ ನಿರೀಕ್ಷೆಯಲ್ಲಿ ಇರದ ಖಾದರ್‌ಗೆ ಇದೀಗ ಜಾಕ್‌ಪಾಟ್ ಸಿಕ್ಕಂತಾಗಿದೆ.

ಖಾದರ್ ಡೆಪ್ಯೂಟಿ ಸ್ಪೀಕರ್‌ಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ. ಅಲ್ಲದೇ 3 ವರ್ಷಗಳ ಕಾಲ ಸ್ಪೀಕರ್ ಸ್ಥಾನ ನೀಡಿದ್ದಕ್ಕಾಗಿ ರಾಜ್ಯಪಾಲರಾದ ಥಾವರ್‌ ಸಿಂಗ್ ಗೆಹ್ಲೋಟ್ ಅವರಿಗೆ ಖಾದರ್ ಧನ್ಯವಾದ ತಿಳಿಸಿದ್ದಾರೆ.

ಖಾದರ್‌ಗೆ ಆರೋಗ್ಯ ಅಥವಾ ವಸತಿ ಖಾತೆ ಸಿಕ್ಕರೆ ಉತ್ತಮವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದರು. ಏಕೆಂದರೆ ಈಗಾಗಲೇ ಖಾದರ್ ಆರೋಗ್ಯ ಖಾತೆ ನಿಭಾಯಿಸಿದ್ದು, ಆ ಅನುಭವ ಅವರಿಗಿದೆ. ಇದೀಗ ಡಿ.ಕೆ.ಸಾಹೇಬ್ರು ಕರೆ ಮಾಡಿ, ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿರುವುದು ಖಾದರ್‌ಗೆ ಖಷಿಯ ವಿಚಾರ. ಆದರೆ ಅವರಿಗೆ ಯಾವ ಖಾತೆ ಸಿಗಲಿದೆ ಎಂದು ಕಾದು ನೋಡಬೇಕಿದೆ.

About The Author