Special Story: ಪ್ರವಾಸಕ್ಕೆ ಹೋಗೋದಂದ್ರೆ ಎಲ್ಲರಿಗೂ ಖುಷಿಯೇ. ಹೊಸ ಬಟ್ಟೆ ಖರೀದಿ ಮಾಡಿ, ಚೆನ್ನಾಗಿ ಶಾಪಿಂಗ್ ಮಾಡಿ ಪ್ರವಾಸಕ್ಕೆ ಹೋಗೋಕ್ಕೆ ನಾವೆಲ್ಲ ರೆಡಿಯಾಗುತ್ತೇವೆ. ಆದರೆ ಬರೀ ಬಟ್ಟೆ, ಮೇಕಪ್ ಕಿಟ್ ಪ್ಯಾಕ್ ಮಾಡಿದ್ರೆ ಸಾಕಾಗೋದಿಲ್ಲ. ಕೆಲವು ಇಂಪಾರ್ಟೆಂಟ್ ವಸ್ತುಗಳು ಸಹ ನಿಮ್ಮ ಬಳಿ ಇರುವುದು ಮುಖ್ಯ. ಅದ್ಯಾವುದು ಅಂತಾ ತಿಳಿಯೋಣ ಬನ್ನಿ.
ಸೋಪ್-ಬ್ರಶ್-ಟೂತ್ ಪೇಸ್ಟ್: ಸೋಪ್-ಬ್ರಶ್-ಟೂತ್ ಬ್ರಶ್ ಅವಶ್ಯಕವಾಗಿ ಇರಲೇಬೇಕು. ನೀವು ಸೋಪ್ ಬದಲು ಸೋಪ್ ಪೇಪರ್ ಸಿಗುತ್ತದೆ ಅದನ್ನೂ ಕೂಡ ಬಳಸಬಹುದು.
ಕೂಲಿಂಗ್ ಗ್ಲಾಸ್: ಕಣ್ಣಿನ ಆರೋಗ್ಯಕ್ಕಾಗಿ, ನೀವು ಕೂಲಿಂಗ್ ಗ್ಲಾಸ್ ಬಳಸುವುದು ಉತ್ತಮ. ಹ್ಯಾಟ್ ಕೂಡ ಧರಿಸಬಹುದು. ಬಿಸಿಲಿನ ಬೇಗೆ ಹೆಚ್ಚಾದಾಗ, ಅದರಿಂದ ರಕ್ಷಣೆಗಾಗಿ ಹ್ಯಾಟ್ ಮತ್ತು ಕೂಲಿಂಗ್ ಗ್ಲಾಸ್ ಧರಿಸುವುದು ಉತ್ತಮ.
ಹ್ಯಾಂಡ್ ಮಿರರ್: ಮೇಕಪ್ ಕಿಟ್ನಲ್ಲಿ ಹ್ಯಾಂಡ್ ಮಿರರ್ ಇದ್ದರೆ ಒಳ್ಳೆಯದು. ಕಾರ್ನಲ್ಲೇ ಕುಳಿತು ನೀವು ಮೇಕಪ್ ಮಾಡಬಹುದು.
ಟಿಶ್ಯೂ ಪೇಪರ್: ನಿಮ್ಮ ಬ್ಯಾಗ್ನಲ್ಲಿ ಯಾವಾಗಲೂ ಟಿಶ್ಯೂ ಪೇಪರ್ ಇರುವುದು ಉತ್ತಮ. ಆಹಾರ ಸೇವಿಸಿದಾಗ, ಮೇಕಪ್ ರಿಮೂವ್ ಮಾಡಲು, ಹೀಗೆ ಅನೇಕ ಕೆಲಸಗಳಿಗೆ ಟಿಶ್ಯೂ ಪೇಪರ್ ಬಳಕೆಯಾಗುತ್ತದೆ. ಮುಖವನ್ನು ಸದಾ ಫ್ರೆಶ್ ಆಗಿರಿಸಲು ನೀವು ವೆಟ್ ಟಿಶ್ಯೂ ಪೇಪರ್ ಕೂಡ ಬಳಸಬಹುದು.
ಸನ್ಸ್ಕ್ರೀನ್: ಮುಖದ ಆರೋಗ್ಯ ಉತ್ತಮವಾಗಿರಿಸಲು ನೀವು ಸನ್ಸ್ಕ್ರೀನ್ ಬಳಸಬೇಕು.
ಸ್ಯಾನಿಟೈಸರ್: ಪ್ರವಾಸಕ್ಕೆ ಹೋದಾಗ, ಆರೋಗ್ಯ ಸರಿಯಾಗಿರಬೇಕು ಅಂದ್ರೆ, ಸ್ವಚ್ಛ ಕಾಪಾಡಬೇಕು ಅಂದ್ರೆ ಸ್ಯಾನಿಟೈಸರ್ ಬಳಸುವುದು ಅತ್ಯಗತ್ಯ.
ಪ್ರಥಮ ಚಿಕಿತ್ಸೆಯ ಸಣ್ಣ ಪರ್ಸ್: ಯಾವಾಗ ನಮಗೆ ಗಾಯವಾಗುತ್ತದೆ, ಯಾವಾಗ ನಮ್ಮ ಆರೋಗ್ಯ ಹಾಳಾಗಬಹುದು ಅಂತಾ ಹೇಳಲು ಸಾಧ್ಯವಿಲ್ಲ. ಹಾಗಾಗಿ ನಾವು ಸದಾ ನಮ್ಮ ಬಳಿ ಸಣ್ಣ ಔಷಧಿಯ ಪರ್ಸ್ ಇರಿಸಿಕೊಳ್ಳಬೇಕು. ಅದರಲ್ಲಿ ಜ್ವರದ ಮಾತ್ರೆ, ಬ್ಯಾಂಡೇಡ್- ತಲೆನೋವಿಗೆ ಬಾಂಬ್-ಸ್ಪ್ರೇ- ಹೀಗೆ ಸಣ್ಣ ವಸ್ತುಗಳನ್ನು ಇಟ್ಟಿರಬೇಕು.
ಪವರ್ ಬ್ಯಾಂಕ್: ಎಲ್ಲೆಡೆಯೂ ಚಾರ್ಜ್ ಹಾಗಿ ಮೊಬೈಲ್ ಇಡಲು ಸಾಧ್ಯವಿಲ್ಲ. ಅದಕ್ಕಾಗಿ ಅತ್ಯುತ್ತಮ ಆಯ್ಕೆ ಅಂದ್ರೆ ಪವರ್ ಬ್ಯಾಂಕ್. ಪವರ್ ಬ್ಯಾಂಕ್ ಇದ್ದರೆ, ನಾವು ಆರಾಮವಾಗಿ ಯಾವಾಗ ಬೇಕಾದ್ರೂ ನಮ್ಮ ಮೊಬೈಲ್ ಚಾರ್ಜ್ ಮಾಡಬಹುದು.
ವಾಟರ್ ಬಾಟಲ್: ನೀರಿನ ಬಾಟಲ್ ಎಲ್ಲರ ಬಳಿಯೂ ಇರುತ್ತದೆ. ಆದರೆ ನೀವು ಪ್ರವಾಸಕ್ಕೆ ಹೋದಾಗ, ಅದನ್ನು ರಿಫಿಲ್ ಮಾಡಬಹುದಾದ ವಾಟರ್ ಬಾಟಲ್ ಹಿಡಿದು ಹೋಗುವುದು ಉತ್ತಮ.
ಫೋಲ್ಡೇಬಲ್ ಬ್ಯಾಗ್: ನಿಮ್ಮ ಬ್ಯಾಗ್ನಲ್ಲಿ ಒಂದೆರಡು ಫೋಲ್ಡೇಬಲ್ ಬ್ಯಾಗ್ ಇಟ್ಟಿರಿ. ಪ್ರವಾಸಕ್ಕೆ ಹೋದಾಗ, ಪದೇ ಪದೇ ದುಡ್ಡು ಖರ್ಚು ಮಾಡಿ, ಅಲ್ಲಿ ಬ್ಯಾಗ್ ಖರೀದಿ ಮಾಡುವುದು ತಪ್ಪುತ್ತದೆ.



