Horoscope: ಈ 5 ರಾಶಿಯವರು ಅಲಂಕಾರ ಪ್ರಿಯರು ಮತ್ತು ಸಾಂಪ್ರದಾಯಿಕ ಉಡುಗೆ ಪ್ರಿಯರು..

Horoscope: ಇಂದು ನಾವು ಯಾವ 5 ರಾಶಿಯವರು ಅಲಂಕಾರ ಮಾಡಲು ಹೆಚ್ಚು ಇಚ್ಛಿಸುತ್ತಾರೆ. ಮತ್ತು ಸಾಂಪ್ರದಾಯಿಕ ಉಡುಗೆಯನ್ನು ಹಾಕಲು ಹೆಚ್ಚು ಇಷ್ಟ ಪಡುತ್ತಾರೆ ಅಂತಾ ಹೇಳಲಿದ್ದೇವೆ.

ವೃಷಭ ರಾಶಿ: ವೃಷಭ ರಾಶಿಯವರು ಶಿಸ್ತಿನಿಂದ ಇರುವವರು. ಯಾವುದೇ ಕಾರ್ಯಕ್ರಮ ಮಾತ್ರವಲ್ಲದೇ, ಮನೆಯಲ್ಲಿ ಇದ್ದರೂ ನೀಟ್ ಆಗಿ ರೆಡಿಯಾಗಿರುತ್ತಾರೆ.

ಸಿಂಹ ರಾಶಿ: ಸಿಂಹ ರಾಶಿಯವರು ಕೂಡ ಅಲಂಕಾರ ಪ್ರಿಯರು. ಇವರು ಚೆಂದವಾಗಿ ಕಾಣುವುದಕ್ಕಿಂತಲೂ, ವಿಶೇಷವಾಗಿ, ಆಕರ್ಷಕವಾಗಿ ಕಾಣಲು ಇಚ್ಛಿಸುತ್ತಾರೆ. ಗತ್ತು ಗಾಂಭಿರ್ಯದ ಗುಣವಿರುವ ಇವರು, ಫ್ಯಾಷನ್ ಮಾಡದಿದ್ದರೂ, ಆಕರ್ಷಕವಾಗಿಯೇ ಕಾಣುತ್ತಾರೆ.

ಧನು ರಾಶಿ: ಧನು ರಾಶಿಯವರು ಜೀವನದಲ್ಲಿ ಶಿಸ್ತಿನಿಂದ ಇರಲು ಬಯಸುವವರು. ಸದಾಕಾಲ ಹೊಸ ಹೊಸ ಬಟ್ಟೆ ಧರಿಸಲು ಇಚ್ಛಿಸುವ ಇವರು, ಪೂಜೆ ಪುನಸ್ಕಾರ, ಹಬ್ಬ, ಮದುವೆ ಮುಂಜಿ ಹೀಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗಮನ ಸೆಳೆಯುವಂತೆ ದಿರಿಸು ಧರಿಸುತ್ತಾರೆ.

ತುಲಾ ರಾಶಿ: ತುಲಾ ರಾಶಿಯವರು ಸೌಂದರ್ಯ ಪ್ರಿಯರು. ಇವರಿಗೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಲು ಭಾರೀ ಇಷ್ಟ. ಹಾಗಾಗಿ ಇವರು ಚಂದ ಚಂದದ ಬಟ್ಟೆ, ಪರ್ಫ್ಯೂಮ್, ಶೂಸ್ ಎಲ್ಲವೂ ಧರಿಸಲು ಇಚ್ಚಿಸುತ್ತಾರೆ. ಇವರ ಆಯ್ಕೆ ಕೂಡ ಅತ್ಯುತ್ತಮವಾಗಿರುತ್ತದೆ. ಅದೇ ರೀತಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಂಪಲ್ ಆಗಿದ್ದರೂ, ಆಕರ್ಷವಾಗಿ ಕಾಣುವಂತೆ ಇರುತ್ತಾರೆ.

ಮಕರ ರಾಶಿ: ಮಕರ ರಾಶಿಯವರು ಸಿಂಪಲ್ ಆಗಿರಲು ಇಚ್ಛಿಸುತ್ತಾರೆ. ಏಕೆಂದರೆ ಇವರು ಸರಳತೆಯಲ್ಲೇ ಸುಂದರತೆ ಹುಡುಕುವವರು. ಆಹಾರದ ವಿಷಯದಲ್ಲಾಗಲಿ, ಸೌಂದರ್ಯದ ವಿಷಯದಲ್ಲಾಗಲಿ ಇವರು ಸರಳವಾಗಿರಲು ಇಚ್ಛಿಸುತ್ತಾರೆ.

About The Author