Sandalwood: ಮದುವೆಯಾಗಿ 4 ವರ್ಷದ ಬಳಿಕ ನಟಿ ಶುಭಪೂಂಜಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಶುಭಪೂಂಜಾ ಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಿತ್ತು. ಆದರೆ ಈ ಬಗ್ಗೆ ಶುಭಪೂಂಜಾ ಆಗಲಿ, ಅವರ ಪತಿ ಸುಮಂತ್ ಆಗಲಿ ಎಲ್ಲಿಯೂ ಈ ಬಗ್ಗೆ ಹೇಳಿಕೆ ನೀಡಿರಲಿಲ್ಲ. ಇದೀಗ ಶುಭಪೂಂಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದು ಮನವಿ ಮಾಡಿದ್ದಾರೆ.
ನನ್ನೆಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ನಮಸ್ಕಾರಗಳು. ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೂ ನನ್ನನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದೀರಿ. ಇದೀಗ ನಾನು ಕೇಳಿಕ“ಳ್ಳುವುದು ಇಷ್ಟೇ, ಸಮಯ ಬಂದಾಗ ನನ್ನ ವೈಯಕ್ತಿಕ ವಿಷಯದಲ್ಲಿ ನಡೆಯುತ್ತಿರುವ ಬಗ್ಗೆ ನಾನೇ ನಿಮಗೆ ಖುದ್ದಾಗಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನಗೂ ಮತ್ತು ಸುಮಂತ್ ಅವರಿಗೂ ಸ್ವಲ್ಪ ಸಮಯಾವಕಾಶ ನೀಡಿ ಎಂದು ಮನವಿ ಮಾಡುತ್ತೇನೆ. ಇಂತಿ ನಿಮ್ಮ ಶುಭಪೂಂಜಾ ಎಂದು ಬರೆದು ವಿನಂತಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಅಂದ್ರೆ, 2022ರ ಜನವರಿಯಲ್ಲಿ ಶುಭ ಪೂಂಜಾ ಉದ್ಯಮಿ ಸುಮಂತ್ ಬಿಲ್ಲವ ಅವರ ಜತೆ ವಿವಾಹವಾಗಿದ್ದರು. ಅದಕ್ಕೂ ಮುನ್ನ ಬಿಗ್‌ಬಾಸ್ ಕನ್ನಡ ಸ್ಪರ್ಧಿಯಾಗಿದ್ದ ಶುಭಪೂಂಜಾ, ಕಾರ್ಯಕ್ರಮದಲ್ಲೂ ತಾವು ಮದುವೆಯಾಗುವ ಹುಡುಗನನ್ನು ಪರಿಚಯಿಸಿ, ಅವನನ್ನು ನಾನು ಪ್ರೀತಿಯಿಂದ ಚಿನ್ನಿಬಾಂಬ್ ಎಂದು ಕರೆಯುತ್ತೇನೆ ಎಂದು ಹೇಳಿದ್ದರು.
ಈ ಮುದ್ದಾದ ಜೋಡಿ ಈ ರೀತಿಯ ನಿರ್ಧಾರ ತೆಗೆದುಕ“ಂಡಿದ್ದು, ಅವರ ಅಭಿಮಾನಿಗಳಿಗೆ ತೀವ್ರ ಬೇಸರವನ್ನುಂಟು ಮಾಡಿದೆ. ಮಾತು ಕತೆ ನಡೆದಿ ಸಮಸ್ಯೆ ಬಗೆಹರಿಸಿ, ಮತ್ತೆ ಕೂಡಿ ಬಾಳಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.




