Chanakya Neeti: ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರಾಗಬೇಡಿ ಅಂತಾರೆ ಚಾಣಕ್ಯರು

Chanakya Neeti: ಒಳ್ಳೆಯತನ ಅನ್ನೋದು ನಮ್ಮನ್ನು ಕಾಪಾಡುವ ಗುಣ. ಒಳ್ಳೆಯತನವಿದ್ದ ಮನುಷ್ಯನಿಗೆ ಉತ್ತಮ ಕರ್ಮಗಳೇ ಕಾಪಾಡುತ್ತದೆ. ಆದರೆ ಈ ಸಮಾಜದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರಾಗಬಾರದು ಅಂತಾರೆ ಚಾಣಕ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ.

ಚಾಣಕ್ಯರು ಹೇಳುವ ಪ್ರಕಾರ, ನಾವು ಉತ್ತಮರಾಗಿರಬೇಕು. ಸಹಾಯದ ಗುಣ, ಕಾಳಜಿ, ದಯೆಯ ಗುಣದವರಾಗಿರಬೇಕು. ಆದರೆ ಆ ಕಾಳಜಿ, ಪ್ರೀತಿ, ದಯೆ ತೋರಿಸುವ ವ್ಯಕ್ತಿ ಅದಕ್ಕೆ ಅರ್ಹನೇ ಎಂಬ ಅರಿವು ಕೂಡ ನಿಮಗಿರಬೇಕು. ನಿಮ್ಮ ಈ ಗುಣವನ್ನು ದುರುಪಯೋಗಪಡಿಸುವರು, ಇದರ ಲಾಭ ಪಡೆಯುವವರಿದ್ದರೆ, ಅಂಥವರಿಂದ ದೂರವಿರುವುದು ಉತ್ತಮ ಅಂತಾರೆ ಚಾಣಕ್ಯರು.

ಅಲ್ಲದೇ ನೀವು ಸಹಾಯದ ಮನೋಭಾವ ಉಳ್ಳವರು, ನಿಮ್ಮನ್ನು ದ್ವೇಷಿಸುವವರಿಗೂ ಪ್ರೀತಿ, ಕಾಳಜಿ ಮಾಡುತ್ತೀರಿ ಎಂದು ಅರಿತ ಕೆಲವರು ಕೂಡ ನಿಮ್ಮನ್ನು ಇಷ್ಟಪಡುವುದಿಲ್ಲ. ಏಕೆಂದರೆ, ಇತರರ ಸಹಾಯಕ ಮನೋಭಾವದ ಗುಣ ಕೆಲವರಿಗೆ ನಾಟಕವೆಂದೆನ್ನಿಸುತ್ತದೆ. ಹಾಗಾಗಿ ಅಂಥವರಿಗೆಲ್ಲ ನೀವು ಕಾಳಜಿ ತೋರುವುದು ನಿಷ್ಪ್ರಯೋಜಕ ಅಂತಾರೆ ಚಾಣಕ್ಯರು.

ಅಲ್ಲದೇ, ನೀವು ಎಲ್ಲ ಸಮಯದಲ್ಲೂ ಸಹಾಯ ಮಾಡಲು ಮುಂದಾಗುವುದು ತರವಲ್ಲ. ಏಕೆಂದರೆ, ಕೆಲವು ಬಾರಿ ಸಹಾಯ ಮಾಡಲು ಹೋಗಿ ಸಮಸ್ಯೆಗೆ ಸಿಲುಕಿದವರು, ಸಾವನ್ನಪ್ಪಿದವರು, ಜೀವನವಿಡೀ ತನಗೆ ಸಂಬಂಧಪಡದೇ ಇರುವ ವಿಷಯಕ್ಕಾಗಿ ಹಿಂಸೆಗೀಡಾದವರನ್ನು ನೀವು ನೋಡಿರುತ್ತೀರಿ. ಹೀಗಾಗಿ ಎಲ್ಲ ಸಮಯದಲ್ಲೂ ಸಹಾಯಕ್ಕೆ ಹೋಗುವುದು ಉತ್ತಮವಲ್ಲ.

About The Author